ಪಿಯು ಕಾಲೇಜು ವಿದ್ಯಾರ್ಥಿನಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ – ದಕ್ಷಿಣ ಕನ್ನಡ ಜಿಲ್ಲಾ ಪಿಯು ತಂಡಕ್ಕೆ ಸಮಗ್ರ ಚಾಂಪಿಯನ್

ಮಂಗಳೂರು (ಧಾರವಾಡ): ದಕ್ಷಿಣ ಕನ್ನಡದ ಜಿಲ್ಲಾ ಪಿಯು ಕಾಲೇಜು ತಂಡ ಧಾರವಾಡದಲ್ಲಿ ನ.29ರಂದು ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್‌  ಕ್ರೀಡಾಕೂಟದಲ್ಲಿ ಒಟ್ಟು 42 ಅಂಕ ಪಡೆದು ಸಮಗ್ರ ಚಾಂಪಿಯನ್‌ ಪಟ್ಟ ಪಡೆದಿದೆ.

ಬೆಳಗಾವಿ ಜಿಲ್ಲೆ ತಂಡ 39 ಅಂಕ ಪಡೆದು ರನ್ನರ್‌ ಅಪ್‌ ಸ್ಥಾನ ಗಳಿಸಿತು. ಬೆಂಗಳೂರು ಉತ್ತರ ಜಿಲ್ಲೆಯ ಶ್ರೀರಕ್ಷಾ ಅತ್ಯುತ್ತಮ ಅಥ್ಲೀಟ್‌ ಗೌರವಕ್ಕೆ ಪಾತ್ರರಾಗಿದ್ದಾರೆ.

ವಿದ್ಯಾರ್ಥಿನಿ ಶ್ರೀರಕ್ಷಾ 3 ಸಾವಿರ ಮೀಟರ್‌ ಮತ್ತು 1,500 ಮೀ. ಓಟದಲ್ಲಿ ಪ್ರಥಮ, 4 ಕಿ.ಮೀ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಒಟ್ಟು 11 ಅಂಕ ಗಳಿಸಿ ಚಾಂಪಿಯನ್‌ ಶಿಪ್‌ ಪಡೆದಿದ್ದಾರೆ.

ಕ್ರೀಡಾಕೂಟದ ಫಲಿತಾಂಶ ಇಂತಿದೆ:

1,500 ಮೀ. ಓಟ: ಶ್ರೀರಕ್ಷಾ (ಬೆಂಗಳೂರು ಉತ್ತರ)– 1, ಸುಷ್ಮಾ ಎಚ್‌.ಎನ್‌ (ಹಾಸನ)–2, ಮಹಾಲಕ್ಷ್ಮಿ ಬಸಕಾಲಿ (ಬಾಗಲಕೋಟೆ)–3
200 ಮೀ. ಓಟ: ರೀತುಶ್ರೀ (ದಕ್ಷಿಣ ಕನ್ನಡ)–1, ವೈಭವಿ ಬದ್ರೂಕ್‌ (ಬೆಳಗಾವಿ)–2, ಅಪೂರ್ವ ನಾಯಕ್‌ (ಬೆಳಗಾವಿ)–3;
400ಮೀ. ಹರ್ಡಲ್ಸ್‌: ಪ್ರಿಯಾಂಕಾ ಓಲೆಕಾರ (ಧಾರವಾಡ)–1, ಅನಘಾ ಕೆ.ಎ (ದಕ್ಷಿಣ ಕನ್ನಡ)–2, ಅರ್ಣಿಕಾ ವರ್ಷಾ ಡಿಸೋಜಾ (ಉಡುಪಿ)–3;
4X400 ಮೀ ರಿಲೇ: ಧಾರವಾಡ ತಂಡ–1, ದಕ್ಷಿಣ ಕನ್ನಡ ತಂಡ–2 ಬೆಂಗಳೂರು ಉತ್ತರ ತಂಡ–3.
3 ಕಿ.ಮೀ. ನಡಿಗೆ: ಅಂಬಿಕಾ (ದಕ್ಷಿಣ ಕನ್ನಡ)–1, ಭೀಮವ್ವ ಮಳಗೊಂಡ (ಧಾರವಾಡ)–2, ದೀಕ್ಷಾ (ಉಡುಪಿ)–3;
4 ಕಿ.ಮೀ ಗುಡ್ಡಗಾಡು ಓಟ: ಮಹಾಲಕ್ಷ್ಮಿ ಬಸಕಾಲಿ (ಬಾಗಲಕೋಟೆ)–1, ಶಿಲ್ಪಾ ಹೊಸಮನಿ (ಧಾರವಾಡ)–2, ಶ್ರೀರಕ್ಷಾ (ಬೆಂಗಳೂರು ದಕ್ಷಿಣ)–3;
ಹ್ಯಾಮರ್‌ ಥ್ರೋ: ಸ್ಪ್ರುಹಾ ನಾಯಕ್‌ (ಬೆಳಗಾವಿ)–1, ಪೃಥ್ವಿ ಕೆ (ದಕ್ಷಿಣ ಕನ್ನಡ)–2, ಅನುಷಾ ಬಿ (ದಕ್ಷಿಣ ಕನ್ನಡ)–3;
ಜಾವೆಲಿನ್‌ ಥ್ರೋ: ದಿಶಾ ಎಸ್‌. (ಬೀದರ್‌)–1, ಬಾಳಕ್ಕ ಪಾಟೀಲ (ಬೆಳಗಾವಿ)–2, ಮಾಧುರ್ಯ (ಉಡುಪಿ)–3;
ಪೋಲ್‌ವಾಲ್ಟ್‌: ಎನ್‌.ಅಶ್ವಿನಿ (ಬಳ್ಳಾರಿ)–1, ಲಕ್ಷ್ಮಿ ಕಮಟಮನಿ (ಧಾರವಾಡ)–2, ಕವನಾ ಎಂ. (ಶಿವಮೊಗ್ಗ)–3;
ಟ್ರಿಪಲ್‌ ಜಂಪ್‌: ಲಕ್ಷಾ (ಮೈಸೂರು)–1, ಸ್ಮಿತಾ ಆರ್‌.ಕಾಕತ್ಕರ್‌ (ಬೆಳಗಾವಿ)–2, ನಿತ್ಯಶ್ರೀ ವಿ. (ಬೆಂಗಳೂರು ಗ್ರಾಮಾಂತರ)–3.

LEAVE A REPLY

Please enter your comment!
Please enter your name here