ಮಂಗಳೂರು (ಹೊಸದಿಲ್ಲಿ): ಲಂಡನ್ ನಿಂದ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದ ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರ ಸಾಮಾನು ಸಂಗ್ರಹ ಕ್ಯಾಬಿನ್ ನಿಂದ ನೀರು ಸೋರಿಕೆಯಾಗಿದೆ. ಈ ಕುರಿತು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಏರ್ ಇಂಡಿಯಾ, “ಈ ಅನಿರೀಕ್ಷಿತ ಘಟನೆಗಾಗಿ ವಿಷಾದಿಸುತ್ತೇವೆ ಎಂದು ಕ್ಷಮೆ ಕೋರಿದೆ. ಪ್ರಯಾಣಿಕರೊಬ್ಬರು ಈ ಘಟನೆಯ ವಿಡಿಯೊವೊಂದನ್ನು ʻxʻ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೊದಲ್ಲಿ ತಲೆಯ ಮೇಲಿನ ಸಾಮಾನು ಸಂಗ್ರಹದ ಕ್ಯಾಬಿನ್ ನ ಸಂಧಿಯಿಂದ ಕೆಲವು ಆಸನಗಳ ಮೇಲೆ ನೀರು ತೊಟ್ಟಿಕ್ಕುತ್ತಿರುವುದನ್ನು ಕಾಣಬಹುದಾಗಿದೆ.
ಏರ್ ಇಂಡಿಯಾ, ನಮ್ಮೊಂದಿಗೆ ಹಾರಾಟ ನಡೆಸಿ, ಇದು ಪ್ರವಾಸವಲ್ಲ, ಬದಲಿಗೆ ಮುಳುಗಿ ಹೋದ ಅನುಭವವಾಗಿದೆ” ಎಂದು ಪ್ರಯಾಣಿಕರು ಏರ್ ಇಂಡಿಯಾವನ್ನು ಖರೀದಿಸಿದ್ದ ಟಾಟಾ ಸಂಸ್ಥೆಯ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನವೆಂಬರ್ 24ರಂದು ಗ್ಯಾಟ್ ವಿಕ್ ನಿಂದ ಅಮೃತಸರಕ್ಕೆ ತೆರಳುತ್ತಿದ್ದ ಎಐ169 ವಿಮಾನದ ಕ್ಯಾಬಿನ್ ನಲ್ಲಿ ಅಪರೂಪದ ಶೀತಲೀಕರಣ ಹೊಂದಾಣಿಕೆಯ ಸಮಸ್ಯೆ ತಲೆದೋರಿದೆ” ಎಂದು ಏರ್ ಇಂಡಿಯಾ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ…
Air India ….
fly with us – it's not a trip …
it's an immersive experience pic.twitter.com/cEVEoX0mmQ— JΛYΣƧΉ (@baldwhiner) November 29, 2023