ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯನನ್ನು ಕಳುಹಿಸಲು ಮುಂದಾದ ನಾಸಾ-ಯಾನಿಯ ಆಯ್ಕೆ ಮಾಡಲಿರುವ ಇಸ್ರೋ

ಮಂಗಳೂರು(ಹೊಸದಿಲ್ಲಿ): ಬಾಹ್ಯಾಕಾಶ ಪಯಣವನ್ನು 1984ರಲ್ಲಿ ಕೈಗೊಂಡ ರಾಕೇಶ್ ಶರ್ಮಾ, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಳಿಕ ಮತ್ತೊಬ್ಬ ಭಾರತೀಯರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ನಾಸಾ ಮುಂದಾಗಿದೆ. 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯ ಬಾಹ್ಯಾಕಾಶ ತಜ್ಞರೊಬ್ಬರನ್ನು ಕಳುಹಿಸುವ ಉದ್ದೇಶದಿಂದ ನಾಸಾ ಅವರಿಗೆ ತರಬೇತಿ ನೀಡಲಿದೆ ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಪ್ರಕಟಿಸಿದ್ದಾರೆ.

“ಈ ಬಾಹ್ಯಾಕಾಶ ಯಾನಿಯ ಆಯ್ಕೆಯನ್ನು ಇಸ್ರೋ ಮಾಡಲಿದೆ. ನಾಸಾ ಇದರ ಭಾಗವಾಗಿರುವುದಿಲ್ಲ, ಈ ಮಿಷನ್ ವಿವರಗಳನ್ನು ಇಸ್ರೋ ಸಿದ್ಧಪಡಿಸುತ್ತಿದೆ” ಎಂದು ಭಾರತ- ಅಮೆರಿಕ ಬಾಹ್ಯಾಕಾಶ ಸಹಕಾರವನ್ನು ವೃದ್ಧಿಸುವ ಸಲುವಾಗಿ ಭಾರತದ ಹಲವು ನಗರಗಳಿಗೆ ಭೇಟಿ ನೀಡಿರುವ ನೆಲ್ಸನ್ ಸ್ಪಷ್ಟಪಡಿಸಿದ್ದಾರೆ. “ಭಾರತ ಅಮೆರಿಕದ ಪಾಲಿಗೆ ಶ್ರೇಷ್ಠ ಪಾಲುದಾರ ಹಾಗೂ ಬಾಹ್ಯಾಕಾಶ ಕ್ಷೇತ್ರದ ಚಟುವಟಿಕೆಗಳಲ್ಲಿ ಉತ್ತಮ ಭವಿಷ್ಯ ಇರುವ ಪಾಲುದಾರ ದೇಶವಾಗಿದೆ. ಅಮೆರಿಕ ಮುಂದಿನ ವರ್ಷ ಹಲವು ಖಾಸಗಿ ಲ್ಯಾಂಡರ್ ಗಳನ್ನು ದಕ್ಷಿಣ ಧ್ರುವದಿಂದ ಚಂದ್ರನತ್ತ ಕಳುಹಿಸಲಿದೆ. ಆದರೆ ವಾಸ್ತವವೆಂದರೆ, ಅಲ್ಲಿ ಪ್ರಥಮ ಬಾರಿಗೆ ಇಳಿದಿರುವ ಹೆಗ್ಗಳಿಗೆ ಭಾರತದ್ದು, ಇದು ಶ್ಲಾಘನೀಯ” ಎಂದು ನಾಸಾ ಮುಖ್ಯಸ್ಥರು ಅಭಿಪ್ರಾಯಪಟ್ಟರು. ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಖಾತೆ ಸಚಿವ ಜಿತೇಂದ್ರ ಸಿಂಗ್ ಜತೆ ಮಾತುಕತೆ ನಡೆಸಿದ ಅಮೆರಿಕ ನಿಯೋಗದ ನೇತೃತ್ವವನ್ನು ನೆಲ್ಸನ್ ವಹಿಸಿದ್ದರು. ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಗಾಗಿ ಅವರು ಈ ಸಂದರ್ಭದಲ್ಲಿ ಭಾರತವನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here