ಕದ್ರಿ ಪ್ರದೇಶದಲ್ಲಿ ಕಾಡುಕೋಣಗಳ ಸಂಚಾರ – ಆತಂಕದಲ್ಲಿ ಜನರು

ಮಂಗಳೂರು : ಮಂಗಳೂರು ನಗರದಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದ್ದು ನಗರವಾಸಿಗಳಲ್ಲಿ ಆತಂಕ ಮನೆಮಾಡಿದೆ. ಮಂಗಳೂರು ನಗರದ ಕದ್ರಿ , ಕೈಬಟ್ಟಲು, ಕರಾವಳಿ ಲೇನ್ ಮತ್ತು ಸುತ್ತ ಮುತ್ತ ಪ್ರದೇಶದಲ್ಲಿ ದೈತ್ಯಗಾತ್ರದ ಕಾಡುಕೊಣ ರಾಜಾರೋಷವಾಗಿ ರಾತ್ರಿ ಹಗಲು ಸುತ್ತಾಡುತ್ತಿದ್ದು ಸ್ಥಳೀಯ ಜನ ಸಹಜವಾಗಿಯೇ ಆತಂಕ್ಕೀಡಾಗಿದ್ದಾರೆ.

ಕೆಲ ಮನೆಗಳ ಕಂಪೌಂಡ್ ಗಳನ್ನು ಹಾರಿ, ಕಬ್ಬಿಣದ ತಡೆ ಬೇಲಿಗಳನ್ನು ಮುರಿದು ಹಾಕಿದೆ. ರಾತ್ರಿ ವೇಳೆ ಕಾಡುಕೋಣ ಸಂಚಾರ ಜೋರಾಗಿಯೇ ಇದ್ದು ಸ್ಥಳೀಯ ಸಿಸಿಟಿವಿಯಲ್ಲಿ ಚಲನವಲನ ದಾಖಲಾಗಿದೆ. ಅರಣ್ಯ ಇಲಾಖಾ ಸಿಬ್ಬಂದಿ ಮತ್ತು ಅಧಿಕಾರಿಗಳು ಕಳೆದ ರಾತ್ರಿ ಸ್ಥಳದಲ್ಲಿ ಬೀಡು ಬಿಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಹಗಲು ಹೊತ್ತು ಕೋಣ ಪರಿಸರದಲ್ಲಿ ಸುತ್ತಾಡುತ್ತಿರುವ ಬಗ್ಗೆ ಮಾಹಿತಿ ದೊರಕಿದ್ದರೂ ಹಗಲಲ್ಲಿ ಕೋಣ ವಿಶ್ರಾಂತಿ ಪಡೆದು ರಾತ್ರಿ ಹೊತ್ತು ಸಂಚರಿಸುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರಿ ವೇಳೆ ಕಾರ್ಯಾಚರಿಸುವುದಾಗಿ ಹೇಳಿದ್ದಾರೆ.

ಸ್ಥಳೀಯ ಮಂಗಳೂರು ನಗರ ಪಾಲಿಕೆಯ ಸದಸ್ಯರಾದ ಮನೋಹರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳೀಯರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಮಂಗಳೂರು ನಗರಕ್ಕೆ ಕಾಡುಕೋಣಗಳು ಲಗ್ಗೆ ಇಟ್ಟಿದ್ದುವು, ಇದೀಗ ಮೂರನೇ ಬಾರಿ ನಗರದಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದೆ.

LEAVE A REPLY

Please enter your comment!
Please enter your name here