ಮಂಗಳೂರು(ಬೆಂಗಳೂರು): ಹೊರವರ್ತುಲ ರಸ್ತೆಯ ಚಂದ್ರಾಲೇಔಟ್ ತಂಗುದಾಣ ಬಳಿ ಕಾರು ಹಾಗೂ ಬಿಎಂಟಿಸಿ ಬಸ್ ನಡುವೆ ಡಿ.4ರಂದು ಅಪಘಾತ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡು ಕಾರು ಹೊತ್ತಿ ಉರಿದಿದೆ. ಅಪಘಾತದಿಂದ ಕಾರು ಸಂಪೂರ್ಣ ಸುಟ್ಟಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಬಸ್ ಚಾಲಕ ಗೌರೀಶ್ ಸಮಯಪ್ರಜ್ಞೆಯಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
‘ಬಿಎಂಟಿಸಿ ಘಟಕ 26ಕ್ಕೆ ಸೇರಿದ್ದ ಬಸ್, ಯಶವಂತಪುರದಿಂದ ನಾಯಂಡಹಳ್ಳಿ ಕಡೆಗೆ ಹೊರವರ್ತುಲ ರಸ್ತೆ ಮೂಲಕ ಹೊರಟಿತ್ತು. ಚಂದ್ರಾಲೇಔಟ್ ತಂಗುದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ಬಸ್ ನಿಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಅತೀ ವೇಗವಾಗಿ ಬಂದಿದ್ದ ಕಾರು, ಬಸ್ಗೆ ಡಿಕ್ಕಿ ಹೊಡೆದಿತ್ತು. ‘ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೆಲ ನಿಮಿಷಗಳಲ್ಲಿ ಬೆಂಕಿ ಕೆನ್ನಾಲಗೆ ಹೆಚ್ಚಾಗಿತ್ತು. ಕಾರು ಧಗ ಧಗ ಉರಿಯಲಾರಂಭಿಸಿತ್ತು. ಅಪಾಯದ ಮುನ್ಸೂಚನೆ ಅರಿತ ಬಸ್ ಚಾಲಕ, ಸ್ವಲ್ಪ ದೂರಕ್ಕೆ ಬಸ್ ಚಲಾಯಿಸಿಕೊಂಡು ಹೋಗಿದ್ದರು. ನಂತರ, ಪ್ರಯಾಣಿಕರು ಕಾರಿನಿಂದ ಸುರಕ್ಷಿತವಾಗಿ ಇಳಿದಿದ್ದಾರೆ. ಬಸ್ನ ಹಿಂಬದಿ ಸೀಟುಗಳು ಸುಟ್ಟಿವೆ’ ಎಂದು ಪೊಲೀಸರು ತಿಳಿಸಿದರು.
ನಿರ್ವಾಹಕ ಹಾಗೂ ಚಾಲಕ, ಬಸ್ನಲ್ಲಿದ್ದ ಅಗ್ನಿನಂದಕ ಸಹಾಯದಿಂದ ಸ್ವಲ್ಪ ಬೆಂಕಿ ನಂದಿಸಿದ್ದರು. ಬಸ್ ಅನ್ನು ಕಾರಿನಿಂದ ದೂರಕ್ಕೆ ತೆಗೆದುಕೊಂಡು ಹೋಗದಿದ್ದರೆ, ಬಸ್ ಹೊತ್ತಿ ಉರಿಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
A #car goes up in flames after hitting a #bus from behind near Nayanadahalli junction, off #Mysuru Road.
No #Casualties.Bus tried to get rid of the burning car by driving ?@NammaBengaluroo @WFRising @TOIBengaluru @0RRCA @NammaKarnataka_ pic.twitter.com/7vMOnS3YEK
— Rakesh Prakash (@rakeshprakash1) December 4, 2023