ಮಂಗಳೂರು(ಕೋಲ್ಕತಾ): ಕೋಲ್ಕತಾ ಮೂಲದ ವ್ಯಕ್ತಿಯನ್ನು ವಿವಾಹವಾಗಲು ಪಾಕಿಸ್ತಾನದ ಯುವತಿಯೊಬ್ಬಳು ಗಡಿದಾಟಿ ಭಾರತಕ್ಕೆ ಆಗಮಿಸಿದ್ದಾರೆ. ಪಾಕಿಸ್ತಾನದ ಯುವತಿ ಜವೇರಿಯಾ ಖಾನುಮ್ ಎಂಬುವವರು ಡಿ.5ರಂದು ವಾಘಾ-ಅಟ್ಟಾರಿ ಅಂತಾರಾಷ್ಟ್ರೀಯ ಗಡಿ ಮೂಲಕ ಕೋಲ್ಕತ್ತಾ ನಿವಾಸಿಯನ್ನು ಮದುವೆಯಾಗಲು ಭಾರತಕ್ಕೆ ಬಂದಿದ್ದಾರೆ. 2024ರ ಜನವರಿಯಲ್ಲಿ ಆಕೆಯ ವಿವಾಹವನ್ನು ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಕರಾಚಿ ನಿವಾಸಿಯಾಗಿರುವ ಜವೇರಿಯಾ ಖಾನುಮ್ ತಮ್ಮ ಕುಟುಂಬಸ್ಥರು ನಿಶ್ಚಯಿಸಿದ ವರ ಕೋಲ್ಕತಾ ಮೂಲದ ಸಮೀರ್ ಖಾನ್ ರನ್ನು ವಿವಾಹವಾಗಲು ಭಾರತಕ್ಕೆ ಬಂದಿದ್ದಾರೆ. ಜವೇರಿಯಾ ಖಾನುಮ್ ರನ್ನು ಬರಮಾಡಿಕೊಳ್ಳಲು ವರ ಸಮೀರ್ ಖಾನ್ ಮತ್ತು ಅವರ ಕುಟುಂಬದ ಕೆಲವು ಸದಸ್ಯರು ಅಗಮಿಸಿದ್ದರು. ಗಡಿಯಲ್ಲಿ ಜವೇರಿಯಾ ಖಾನುಮ್ ಗೆ ಭರ್ಜರಿ ಸ್ವಾಗತ ನೀಡಿದ ವರನ ಕಡೆಯವರು ಡೋಲು ಕುಣಿತದ ಮೂಲಕ ಹೂವಿನ ಸುರಿಮಳೆ ಗೈದು ಆಕೆಯನ್ನು ಸ್ವಾಗತಿಸಿದರು. ಜವೇರಿಯಾ ಖಾನುಮ್ ಭಾರತಕ್ಕೆ ಬರಲು ಸತತ ಪ್ರಯತ್ನ ಪಟ್ಟಿದ್ದರು. ಈ ಹಿಂದೆ ಸಲ್ಲಿಸಿದ್ದ ಎರಡು ವೀಸಾ ಅರ್ಜಿಗಳನ್ನು ಅಧಿಕಾರಿಗಳು ನಿರಾಕರಿಸಿದ್ದರು. ಕೋವಿಡ್ ಸಾಂಕ್ರಾಮಿಕವು ಸುಮಾರು ಐದು ವರ್ಷಗಳ ಕಾಲ ಅವರ ಯೋಜನೆಗಳನ್ನು ಸ್ಥಗಿತಗೊಳಿಸಿತ್ತು. ಆದರೆ ಇದೀಗ ಆಕೆಗೆ ವಿವಾಹಕ್ಕಾಗಿ 45 ದಿನಗಳ ವೀಸಾವನ್ನು ನೀಡಲಾಗಿದೆ.
ಅಟ್ಟಾರಿಯಲ್ಲಿ ಗಡಿಯಲ್ಲಿ ಸ್ವತಃ ಯುವತಿ ಜವೇರಿಯಾ ಖಾನುಮ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ‘ನನಗೆ 45 ದಿನಗಳ ವೀಸಾ ನೀಡಲಾಗಿದೆ. ನಾನು ಇಲ್ಲಿಗೆ ಬಂದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಆಗಮನದ ನಂತರ ನಾನು ಈಗಾಗಲೇ ಇಲ್ಲಿ ತುಂಬಾ ಪ್ರೀತಿಯನ್ನು ಪಡೆಯುತ್ತಿದ್ದೇನೆ. ಜನವರಿ ಮೊದಲ ವಾರದಲ್ಲಿ ನಮ್ಮ ಮದುವೆ ನಡೆಯಲಿದೆ. ಐದು ವರ್ಷಗಳ ನಂತರ ನನಗೆ ವೀಸಾ ಸಿಕ್ಕಿದೆ ಎಂದು ನನಗೆ ನಂಬಲಾಗುತ್ತಿಲ್ಲ. ಇದು ಸುಖಾಂತ್ಯ ಮತ್ತು ಸಂತೋಷದ ಆರಂಭ. ಮನೆಗೆ ಮರಳಿದ ನಮ್ಮ ಮನೆಯ ಪ್ರತಿಯೊಬ್ಬರೂ ತುಂಬಾ ಸಂತೋಷವಾಗಿದ್ದಾರೆ”ಎಂದು ಹೇಳಿದರು.
ಇದೇ ವೇಳೆ ತಮ್ಮ ಮದುವೆ ಮತ್ತು ಪ್ರೀತಿಯ ಬಗ್ಗೆ ಮಾತನಾಡಿದ ಖಾನುಮ್, ನಮ್ಮ ತಾಯಿಯ ಫೋನ್ನಲ್ಲಿ ಸಮೀರ್ ಖಾನ್ ಅವರ ಫೋಟೋವನ್ನು ನೋಡಿದ ನಂತರ ಅವರನ್ನು ಮದುವೆಯಾಗಲು ಆಸಕ್ತಿ ವ್ಯಕ್ತಪಡಿಸಿದೆ. ಮೇ 2018 ರಲ್ಲಿ ನಾನು ಓದು ಮುಗಿಸಿ ಜರ್ಮನಿಯಿಂದ ಮನೆಗೆ ಬಂದಿದ್ದೆ. ನನ್ನ ತಾಯಿಯ ಫೋನ್ನಲ್ಲಿ ಸಮೀರ್ ಖಾನ್ ಅವರ ಫೋಟೋವನ್ನು ನೋಡಿದೆ ಮತ್ತು ಬಳಿಕ ಹುಡುಗ ಒಳ್ಳೆಯವನು ಎಂದು ತಿಳಿದು ಮದುವೆಗೆ ನನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಸಮೀರ್ ರನ್ನು ಆಯ್ಕೆ ಮಾಡಿದೆ” ಎಂದು ಅವರು ಹೇಳಿದರು.
ವೀಸಾ ನೀಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ ವರ್ಷ ಜನವರಿಯಲ್ಲಿ ನಮ್ಮ ಮದುವೆ ನಡೆಯಲಿರುವುದರಿಂದ ನನ್ನ ತಾಯಿ ತುಂಬಾ ಸಂತೋಷವಾಗಿದ್ದಾರೆ. ಜರ್ಮನಿಯಲ್ಲಿದ್ದ ನನ್ನ ಸ್ನೇಹಿತರು – ಆಫ್ರಿಕಾ, ಸ್ಪೇನ್, ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳಿಂದ ಮದುವೆಗೆ ಹಾಜರಾಗುವ ಸಾಧ್ಯತೆಯಿದೆ ಎಂದು ಖಾನುಮ್ ಹೇಳಿದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
#WATCH | Amritsar, Punjab: A Pakistani woman, Javeria Khanum arrived in India (at the Attari-Wagah border) to marry her fiancé Sameer Khan, a Kolkata resident. She was welcomed in India to the beats of 'dhol'.
She says, "I am extremely happy…I want to convey my special thanks… pic.twitter.com/E0U00TIYMX
— ANI (@ANI) December 5, 2023