ಮಂಗಳೂರಿನ ಮೊಹಮ್ಮದ್ ಅಯಾನ್ ಸ್ಟೇಟಿಂಗ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮಂಗಳೂರು: ಕರ್ನಾಟಕ ರೋಲರ್ ಸ್ಟೇಟಿಂಗ್ ಅಸೋಸಿಯೇಶನ್ ವತಿಯಿಂದ ಮಂಗಳೂರಿನ ಸ್ಕೆಟ್ ಸಿಟಿ ಸ್ಕೆಟಿಂಗ್ ರಿಂಕ್‌ನಲ್ಲಿ ನಡೆದ ರಾಜ್ಯ ಮಟ್ಟದ ಸ್ಕೆಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 7 ರಿಂದ 9 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮಂಗಳೂರಿನ ಮೊಹಮ್ಮದ್ ಅಯಾನ್ ಒಂದು ಚಿನ್ನ, 2 ಕಂಚಿನ ಪದಕ ಪಡೆದು ರಾಷ್ಟ್ರಮಟ್ಟದ ಸ್ಟೇಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾನೆ.

ಚೆನ್ನೈನ ಸ್ಪಾಟಿಪೈಸ್ಕೆಟಿಂಗ್ ರಿಂಕ್‌ನಲ್ಲಿ ಡಿ15ರಿಂದ 25ರ ವರೆಗೆ ನಡೆಯಲಿರುವ 61ನೇ ರಾಷ್ಟ್ರ ಮಟ್ಟದ ರೋಲರ್ ಸ್ಕೆಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕವನ್ನು ಅಯಾನ್ ಪ್ರತಿನಿಧಿಸಲಿದ್ದಾರೆ. ಇವರು ಮಂಗಳೂರು ರೋಲಿಂಗ್ ಸ್ಟೇಟಿಂಗ್ ಕ್ಲಬ್‌ನಲ್ಲಿ ತರಬೇತುದಾರ ಮಹೇಶ್‌ ಕುಮಾರ್, ಶ್ರವಣ್ ಮಹೇಶ್ ಅವರಿಂದ ತರಬೇತಿ ಪಡೆಯುತ್ತಿದ್ದಾನೆ.

LEAVE A REPLY

Please enter your comment!
Please enter your name here