ರಾಜಸ್ಥಾನದಲ್ಲಿ ರಾಜಕೀಯ ಸಂಚಲನ – 30 ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆಯೇ..? – ಕುತೂಹಲ ಸೃಷ್ಟಿಸಿದ ವಸುಂಧರಾ ರಾಜೇ ನಡೆ

ಮಂಗಳೂರು(ರಾಜಸ್ಥಾನ): ಪಂಚರಾಜ್ಯಗಳ ಚುನಾವಣೆಯಲ್ಲಿ ಗೆದ್ದು 3 ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಏರಲು ಮುಂದಾಗಿರುವ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡದಲ್ಲಿ ಮುಖ್ಯ ಮಂತ್ರಿ ಆಯ್ಕೆಯ ಕಸರತ್ತು ನಡೆದಿರುವಂತೆ ರಾಜಸ್ಥಾನದ 30 ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಭಾರೀ ಸಂಚಲನ ಸೃಷ್ಟಿಸಿದೆ.

ರಾಜಸ್ಥಾನದಲ್ಲಿ ಸಿಎಂ ಆಯ್ಕೆ ವಿಚಾರ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ. ಬಿಜೆಪಿಯ ಪ್ರಬಲ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಈ ಭಾರಿ ತನಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ 30 ಶಾಸಕರನ್ನು ಸೇರಿಸಿಕೊಂಡು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ರಾಜ್ಯ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ರಾಜಸ್ಥಾನದಲ್ಲಿ ಬಾಲಕನಾಥ್ ಯೋಗಿ ಅವರಿಗೆ ಮುಖ್ಯಮಂತ್ರಿ ಪಟ್ಟ ಎಂಬ ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಇನ್ನಿತರ ಮಾಧ್ಯಮಗಳಲ್ಲಿ ಹರಿದಾಡಿತ್ತು. ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿರುವ ವಸುಂಧರಾ ರಾಜೇ ಅವರು ನೂತನವಾಗಿ ಆಯ್ಕೆಯಾದ 30 ಶಾಸಕರನ್ನು ಮನೆಗೆ ಕರೆಸಿ ಸಭೆ ನಡೆಸಿದ್ದು, ಮುಖ್ಯಮಂತ್ರಿ ಸ್ಥಾನ ನೀಡದಿದ್ದಲ್ಲಿ 30 ಶಾಸಕರೊಂದಿಗೆ ಪಕ್ಷಾಂತರ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನೊಂದೆಡೆ ನಗರದ ಹೊರವಲಯದ ರೆಸಾರ್ಟೊಂದಕ್ಕೆ 5 ಮಂದಿ ಬಿಜೆಪಿ ಶಾಸಕರು ಭೇಟಿ ನೀಡಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಆದರೆ ಯಾರ ನಿರ್ದೆಶನದನ್ವಯ  ಶಾಸಕರನ್ನು ರೆಸಾರ್ಟ್‌ ನಲ್ಲಿರಿಸಲಾಗಿದೆ ಎಂದು ತಿಳಿದು ಬಂದಿಲ್ಲ. ಈ ನಡುವೆ ತಲುಪಿರುವ ವಸುಂಧರಾ ರಾಜೇ ದೆಹಲಿ ತಲುಪಿದ್ದು ಕುತೂಹಲ ಮತ್ತಷ್ಟು ಹೆಚ್ಚಿದೆ.

LEAVE A REPLY

Please enter your comment!
Please enter your name here