ಮಂಗಳೂರು: ಕರ್ನಾಟಕ ರಾಜ್ಯ ಈಜು ಸಂಸ್ಥೆಯ ಆಶ್ರಯದಲ್ಲಿ ಉಡುಪಿಯಲ್ಲಿ ಜರುಗುತ್ತಿರುವ ರಾಜ್ಯಮಟ್ಟದ ಶಾರ್ಟ್ ಕೋರ್ಸ್ ಈಜು ಸ್ಪರ್ಧೆಯಲ್ಲಿ ಮೂರನೇ ದಿನದ ಗುಂಪು 1ರ 200 ಮೀಟರ್ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಮಂಗಳೂರಿನ ಅಲಿಸ್ಟರ್ ಸಾಮುಯ್ಯಲ್ ರೇಗೋ ಡಾಲ್ಫಿನ್ ಆಕ್ವಾಟಿಕ್ ತಂಡವನ್ನು ಪ್ರತಿನಿಧಿಸಿ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ 2019ರಲ್ಲಿ ಮಂಡ್ಯದಲ್ಲಿ ಜರಗಿದ ಈಜು ಸ್ಪರ್ಧೆಯಲ್ಲಿ, ಬಸವನಗುಡಿ ಈಜು ಸಂಸ್ಥೆಯ ಈಜು ಪಟು ಮೋಹಿತ್ ವೆಂಕಟೇಶ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಸಂತ ಎಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಆಲಿಸ್ಟರ್ ಶರ್ಲಿ ರೇಗೂ ಹಾಗೂ ವಿಕ್ಟರ್ ರೇಗೋ ದಂಪತಿಗಳ ಪುತ್ರ. ಬೆಂಗಳೂರಿನ ಡಾಲ್ಫಿನ್ ಅಕ್ವಟಿಕ್ ತಂಡದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ನಿಹಾರ್ ಅಮೀನ್ ಹಾಗೂ ಮಧು ಕುಮಾರ್ ಇವರ ಮಾರ್ಗದರ್ಶನದಲ್ಲಿ ಮುಖ್ಯ ತರಬೇತುದಾರ ಲೋಕರಾಜ್ ವಿ ಎಸ್ ವಿಟ್ಲ ಹಾಗೂ ಸ್ಯಾಂಜೋ ಕೆ ಪಿ ಇವರಲ್ಲಿ ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆಲಿಸ್ಟರ್ ಸಾಧನೆಯನ್ನು ಸಂತ ಎಲೋಶಿಯಸ್ ಸಮೂಹ ಸಂಸ್ಥೆಗಳ ರೆ.ಫಾದರ್ ಮೆಲ್ವಿನ್ ಪಿಂಟೋ ಹಾಗೂ ವಿ ವನ್ ಅಕ್ವಾ ಸೆಂಟರ್ ನ ಡೈರೆಕ್ಟರ್ ನವೀನ್ ಹಾಗೂ ರೂಪಾ ಅಭಿನಂದಿಸಿದ್ದಾರೆ.