ಸೈಕಲ್ ತುಳಿಯುವವರಿಂದ ದೇಶದ ಅರ್ಥ ವ್ಯವಸ್ಥೆಗೆ ಹಾನಿ-ಅದು ಹೇಗೆ ಅಂತೀರಾ? – ವಿಚಿತ್ರವಾದರೂ ಸತ್ಯ ಈ ವರದಿ ಓದಿ ನೋಡಿ

ಮಂಗಳೂರು: ಸೈಕಲ್ ತುಳಿಯೋದರಿಂದ ಮನುಷ್ಯ, ಆರೋಗ್ಯಕರವಾಗಿರಬಹುದು ಇದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇಲ್ಲೊಬ್ಬ ಸೈಕಲ್‌ ತುಳಿಯುವುದು ಅರ್ಥ ವ್ಯವಸ್ಥೆಗೆ ಹಾನಿಯಾಗಲಿದೆ ಎಂದು  ಹೇಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಇದನ್ನು ನೀವು ಹಾಸ್ಯ ಎಂದರೂ ಪರವಾಗಿಲ್ಲ, ಕುಹಕ ಎಂದರೂ ಪರವಾಗಿಲ್ಲ. ಆದರೆ ವಿಚಾರ ಮಾತ್ರ ನಿಮ್ಮನ್ನು ಯೋಚನೆಗೀಡು  ಮಾಡುವಂತಿದೆ.

ಈ ವ್ಯಕ್ತಿಯ ಪ್ರಕಾರ ಸೈಕಲ್ ತುಳಿಯುವವನು ಬೇರೆ ವಾಹನ ಖರೀದಿಸುವುದಿಲ್ಲ. ಅವನು ಸಾಲವನ್ನು ಪಡೆಯುವುದಿಲ್ಲ, ವಾಹನದ ವಿಮೆಯನ್ನು ಮಾಡಿಸಲ್ಲ, ಪೆಟ್ರೋಲ್ ನ್ನು ಖರೀದಿಸುವುದಿಲ್ಲ, ವಾಹನಕ್ಕೆ ಸರ್ವಿಸ್ ಮಾಡಿಸುವುದಿಲ್ಲ, ಹೆಲ್ಮೆಟ್, ಲೈಸೆನ್ಸ್  ಎಂದು ಹೇಳಿ ದಂಡವನ್ನು ಕಟ್ಟುವುದಿಲ್ಲ, ಸೈಕಲ್ ತುಳಿಯುವವನು ದಪ್ಪ ಆಗುವುದಿಲ್ಲ. ಆರೋಗ್ಯಪೂರ್ಣ ವ್ಯಕ್ತಿ ಔಷಧ ಖರೀದಿಸುವುದಿಲ್ಲ, ಅವನು ಚಿಕಿತ್ಸೆಗೆಂದು ಆಸ್ಪತ್ರೆಗೂ ಹೋಗುವುದಿಲ್ಲ.

ಆರೋಗ್ಯಪೂರ್ಣ ವ್ಯಕ್ತಿ ಅರ್ಥ ವ್ಯವಸ್ಥೆಗೆ ಮಾರಕವಾಗುತ್ತಾನೋ ಇಲ್ಲವೋ ಎಂಬುವುದನ್ನು ಈಗ ನೀವೇ ಯೋಚನೆ ಮಾಡಿ.  ಈ ವ್ಯಕ್ತಿಯ ಪ್ರಕಾರ ನಡೆದುಕೊಂಡು ಹೋಗುವವರು, ಸೈಕಲ್ ತುಳಿಯೋರಿಗಿಂತ ಖತರ್ನಾಕ್ ಅಂತೆ. ಯಾಕೆಂದರೆ ಇವರು ಸೈಕಲ್‌ ಖರೀದಿಸುವುದಿಲ್ಲ. ಇನ್ನು ಫಾಸ್ಟ್ ಫುಡ್ ಅಂಗಡಿಯಾತ 30 ಜನರಿಗೆ ಉದ್ಯೋಗ ಕಲ್ಪಿಸುತ್ತಾನಂತೆ. 10 ಜನ ಹೃದಯ ಚಿಕಿತ್ಸಕರನ್ನು, 10 ಜನ ದಂತ ಚಿಕಿತ್ಸಕರನ್ನು, 10 ಜನ ತೂಕ ಕಡಿಮೆ ಮಾಡುವವರಿಗೆ ಉದ್ಯೋಗ ಸೃಷ್ಟಿ ಮಾಡುತ್ತಾನಂತೆ.

ತಮಾಷೆ ಎನಿಸಿದರೂ ವಿಷಯ ಒಪ್ಪತಕ್ಕದ್ದು ಏನಂತೀರಿ?

LEAVE A REPLY

Please enter your comment!
Please enter your name here