ಮದುವೆ ಮಾಡಿಸುವುದಾಗಿ ನಂಬಿಸಿ ವಂಚನೆ -ಮಾಜಿ ಯೋಧನಿಗೆ ಬ್ಲಾಕ್‌ ಮೈಲ್‌ ಮಾಡಿ ಹಣ ವಸೂಲಿ – ಆರೋಪಿಗಳಿಬ್ಬರ ಬಂಧನ

ಮಂಗಳೂರು(ಕೊಡಗು): ನಿವೃತ್ತ ಸೇನಾಧಿಕಾರಿಗೆ ಮದುವೆ ಮಾಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಡೆದಿದ್ದು, ವಂಚನೆ ಪ್ರಕರಣ ಸಂಬಂಧ ಮಡಿಕೇರಿ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಫೈಜಲ್, ಅಬ್ದುಲ್ ಬಷೀರ್, ಸಾದಿಕ್ ಬಂಧಿತ ಆರೋಪಿಗಳು. ಜಾನ್ ಮ್ಯಾಥ್ಯು ಮೋಸ ಹೋದ ನಿವೃತ್ತ ಸೇನಾಧಿಕಾರಿ. ಕೇರಳ ಮೂಲದವರಾದ ನಿವೃತ್ತ ಸೇನಾಧಿಕಾರಿ ಜಾನ್ ಮ್ಯಾಥ್ಯು ಅವಿವಾಹಿತರಾಗಿಯೇ ಉಳಿದಿದ್ದರು. ಆದರೆ ಜಾನ್ ಮ್ಯಾಥ್ಯುಗೆ ಪರಿಚಯವಾಗಿದ್ದ ಆರೋಪಿಗಳು. ಮದುವೆ ಮಾಡಿಕೊಳ್ಳುವಂತೆ ಪುಸಲಾಯಿಸಿದ್ದರು. ಮದುವೆ ಮಾಡಿಕೊಂಡರೆ ನಿವೃತ್ತ ಜೀವನ ಸುಖವಾಗಿರುತ್ತದೆ ಎಂದು ನಂಬಿಸಿದ್ದರು.

ಖದೀಮರ ಮಾತುಗಳನ್ನು ನಂಬಿದ್ದ ನಿವೃತ್ತ ಸೇನಾಧಿಕಾರಿ ಮದುವೆಯಾಗಲು ಒಪ್ಪಿಕೊಂಡಿದ್ದರು. ಅದರಂತೆಯೇ ಹುಡುಗಿ ತೋರಿಸುವುದಾಗಿ ಅವಳೊಂದಿಗೆ ಮದುವೆ ಮಾಡಿಸುವುದಾಗಿ ಪಕ್ಕಾ ಪ್ಲಾನ್ ಮಾಡಿಕೊಂಡು ನಿವೃತ್ತಕ ಸೇನಾಧಿಕಾರಿಯನ್ನ ಮಡಿಕೇರಿ ಹೋಂ ಸ್ಟೇಗೆ ಕರೆದುಕೊಂಡು ಬಂದಿದ್ದ ಆರೋಪಿಗಳು ಹೋಂ ಸ್ಟೇನಲ್ಲೇ ಗೊತ್ತುಪಡಿಸಿದ ಮಹಿಳೆಯೊಬ್ಬಳೊಂದಿಗೆ ವಿವಾಹ ಮಾಡಿಸಿದ್ದರು. ಬಳಿಕ ವಿವಾಹದ ಫೋಟೊಗಳನ್ನು ಇಟ್ಟುಕೊಂಡು ನಿವೃತ್ತ ಸೇನಾಧಿಕಾರಿಗೆ ಬ್ಲಾಕ್ ಮಾಡಲು ಶುರು ಮಾಡಿದ್ದಾರೆ.

LEAVE A REPLY

Please enter your comment!
Please enter your name here