ಘಮಘಮಿಸುವ ಒಗ್ಗರಣೆ ಹಾಕುತ್ತಿದ್ದೀರಾ? – ಈರುಳ್ಳಿ ಬಳಿಕ ಈಗ ಬೆಳ್ಳುಳ್ಳಿ ಬೆಲೆ ಗಗನಕ್ಕೆ- ಕೆ.ಜಿ.ಗೆ ರೂ. 350

ಮಂಗಳೂರು(ಮುಂಬೈ): ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಬೆಳ್ಳುಳ್ಳಿ ದರ 300-400 ರೂಪಾಯಿ ತಲುಪಿದೆ. ಮಹಾರಾಷ್ಟ್ರದಾದ್ಯಂತ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಬೆಳ್ಳುಳ್ಳಿ ಬೆಳೆ ತೀವ್ರವಾಗಿ ಕುಸಿದು ಪೂರೈಕೆ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಬೆಳ್ಳುಳ್ಳಿ ಬೆಳೆಯುವ ಪ್ರಮುಖ ಪ್ರದೇಶಗಳಾದ ನಾಸಿಕ್ ಮತ್ತು ಪುಣೆಯಲ್ಲಿ ಪೂರೈಕೆ ಇಲ್ಲದ ಕಾರಣ ನೆರೆಯ ಗುಜರಾತ್, ಮಧ್ಯಪ್ರದೇಶ ಹಾಗೂ ಗುಜರಾತ್ ನಿಂದ ಬೆಳ್ಳುಳ್ಳಿ ಆಮದು ಮಾಡಿಕೊಳ್ಳುತ್ತಿರುವುದು ಸಾಗಾಣಿಕೆ ವೆಚ್ಚ ಮತ್ತು ಸ್ಥಳೀಯ ಲೆವಿ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು ಎಪಿಎಂಸಿ ಸಗಟು ಯಾರ್ಡ್ ಗಳಲ್ಲಿ ಪ್ರತಿ ಕೆ.ಜಿ.ಗೆ 100-150 ರೂಪಾಯಿ ಇದ್ದ ಬೆಳ್ಳುಳ್ಳಿ ದರ ಇದೀಗ 150-250 ರೂಪಾಯಿಗೆ ಹೆಚ್ಚಿದೆ. ಈ ಬದಲಾವಣೆಯಿಂದಾಗಿ ಚಿಲ್ಲರೆ ಮಾರಾಟ ದರ 300-400 ರೂಪಾಯಿಗೆ ತಲುಪಿದೆ. ಕಳೆದ ಕೆಲ ವಾರಗಳಿಂದ ಬೆಳ್ಳುಳ್ಳಿ ಬೆಲೆ ದುಪ್ಪಟ್ಟು ಆಗಿದ್ದು, ಕೆಲ ವಾರಗಳ ವರೆಗೆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇಲ್ಲ ಎಂದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಪುತ್ತೂರಿನಲ್ಲಿ ಬೆಳ್ಳುಳ್ಳಿ ಬೆಲೆ ಕಿಲೋ ಒಂದರ ಬೆಲೆ 300-350ಕ್ಕೆ ಏರಿಕೆಯಾಗಿದೆ. ದಕ್ಷಿಣ ರಾಜ್ಯಗಳಿಂದ ಬರುವ ಪೂರೈಕೆ ಕೂಡಾ ಬಹುತೇಕ ಸ್ಥಗಿತಗೊಂಡಿರುವುದು ಪರಿಸ್ಥಿತಿಯ ವಿಕೋಪಕ್ಕೆ ಕಾರಣವಾಗಿದೆ. ಊಟಿ ಹಾಗೂ ಮಲಪ್ಪುರಂನಿಂದ ಕೂಡಾ ಪೂರೈಕೆ ಗಣನೀಯವಾಗಿ ಕುಸಿದಿರುವುದು ಬೆಲೆ ಹೆಚ್ಚಳಕ್ಕೆ ಕಾರಣ.

LEAVE A REPLY

Please enter your comment!
Please enter your name here