2025 ಅಕ್ಟೋಬರ್ ನಿಂದ ಲಾರಿಗಳ ಕ್ಯಾಬಿನ್ ಗಳಲ್ಲಿ ಏರ್‌ ಕಂಡೀಶನ್ ಕಡ್ಡಾಯ-ಅಧಿಸೂಚನೆ ಹೊರಡಿಸಿದ ಕೇಂದ್ರ

ಮಂಗಳೂರು(ಹೊಸದಿಲ್ಲಿ): ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಅಕ್ಟೋಬರ್ 2025ರ ಬಳಿಕ ತಯಾರಾಗುವ ಲಾರಿಗಳಲ್ಲಿ ಚಾಲಕರಿಗಾಗಿ ಎಸಿ ಕ್ಯಾಬಿನ್‌ ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಶುಕ್ರವಾರ ಸಂಜೆ ಹೊರಡಿಸಲಾಗಿರುವ ಗಜೆಟ್ ಅಧಿಸೂಚನೆಯು ಎನ್2 ಮತ್ತು ಎನ್3 ವರ್ಗಗಳ ಲಾರಿಗಳಿಗೆ ಅನ್ವಯಿಸಲಿದೆ.

ಎನ್2 ವರ್ಗವು ಸರಕುಗಳ ಸಾಗಾಣಿಕೆಗೆ ಬಳಸಲಾಗುವ,ಒಟ್ಟು 3.5ರಿಂದ 12 ಟನ್ ವರೆಗೆ ತೂಕವನ್ನು ಹೊಂದಿರುವ ಲಾರಿಗಳು ಮತ್ತು ಎನ್3 ವರ್ಗವು 12 ಟನ್ ಗಳಿಗಿಂತ ಹೆಚ್ಚಿನ ತೂಕವನ್ನು ಹೊಂದಿರುವ ಲಾರಿಗಳನ್ನು ಒಳಗೊಂಡಿರುತ್ತವೆ. ಲಾರಿ ಚಾಲಕರು ಹೆಚ್ಚಿನ ತಾಪಮಾನದ ಸ್ಥಿತಿಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ವಿಷಾದವನ್ನು ವ್ಯಕ್ತಪಡಿಸಿದ್ದ ಕೇಂದ್ರ ಸಾರಿಗೆ ಸಚಿವ ಗಡ್ಕರಿ, ವೆಚ್ಚ ಹೆಚ್ಚಾಗಲಿದೆ ಎಂದು ಕೆಲವರು ಆಕ್ಷೇಪಿಸಿದ್ದರೂ ಲಾರಿ ಚಾಲಕರಿಗಾಗಿ ಎಸಿ ಕ್ಯಾಬಿನ್‌ ಗಳ ಅಳವಡಿಕೆ ಪ್ರಸ್ತಾವಕ್ಕೆ ತಾನು ಒತ್ತು ನೀಡುತ್ತಿರುವುದಾಗಿ ತಿಳಿಸಿದ್ದರು.

LEAVE A REPLY

Please enter your comment!
Please enter your name here