ಎನ್‌ಇಪಿ ರದ್ದು ನಿರ್ಧಾರ ವಾಪಸ್ ಇಲ್ಲವೇ ಇಲ್ಲ-ಎಸ್‌ಎಸ್‌ಎಲ್‌ಸಿ, ಪಿಯುಸಿ ಗೆ 3 ಪಬ್ಲಿಕ್ ಪರೀಕ್ಷೆ-ಸಚಿವ ಮಧು ಬಂಗಾರಪ್ಪ

ಮಂಗಳೂರು(ಬೆಂಗಳೂರು): ಎಸ್‌ಎಸ್‌ಎಲ್‌ಸಿ, ಪಿಯುಸಿಗೆ ಇನ್ಮುಂದೆ 3 ಪಬ್ಲಿಕ್ ಪರೀಕ್ಷೆಗಳನ್ನು ಅನುಷ್ಠಾನ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಸುವರ್ಣಸೌಧದಲ್ಲಿ ನಡೆದ ಕಲಾಪದಲ್ಲಿ ಬಿಜೆಪಿ ಶಾಸಕರೊಬ್ಬರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಹಿಂದಿನ ಪಠ್ಯಕ್ರಮ ಜಾರಿ ಮಾಡಿ, ಬಿಜೆಪಿ ಸರ್ಕಾರ ಮಾಡಿದ ಲೋಪ ಸರಿ ಮಾಡಿದ್ದೇವೆ. ಎಸ್‌ಎಸ್‌ಎಲ್‌ಸಿ, ಪಿಯುಸಿಗೆ 3 ಪಬ್ಲಿಕ್ ಪರೀಕ್ಷೆಗಳನ್ನು ಅನುಷ್ಠಾನ ಮಾಡಿದ್ದೇವೆ ಎಂದರು. ಇದರಿಂದ ಮಕ್ಕಳಿಗೆ ಅನುಕೂಲ ಆಗುತ್ತದೆ. ಈ ವ್ಯವಸ್ಥೆ ಎನ್‌ಇಪಿಯಲ್ಲಿ ಇಲ್ಲ. ಕೆಪಿಎಸ್ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭ ಮಾಡುವ ವ್ಯವಸ್ಥೆ ಮಾಡ್ತಿದ್ದೇವೆ. ಎಸ್‌ಇಪಿಯಲ್ಲಿ ಉತ್ತಮ ಶಿಕ್ಷಣ ಕೊಡ್ತೀವಿ. ಇದಕ್ಕಾಗಿ ಸಮಿತಿ ನೇಮಕ ಮಾಡಲಾಗಿದೆ. ಉತ್ತಮ ವ್ಯಕ್ತಿಗಳನ್ನ ಸೃಷ್ಟಿ ಮಾಡುವ ಪಾಲಿಸಿ ಎಸ್‌ಇಪಿ ಜಾರಿ ಮಾಡ್ತೀವಿ. ಎನ್‌ಇಪಿ ರದ್ದು ನಿರ್ಧಾರ ವಾಪಸ್ ಇಲ್ಲವೇ ಇಲ್ಲ ಎಂದು ಅವರು ಹೇಳಿದರು.

 

LEAVE A REPLY

Please enter your comment!
Please enter your name here