ಚೀನಾದಲ್ಲಿ 6.2 ತೀವ್ರತೆಯ ಭೂಕಂಪ – 111 ಮಂದಿ ಸಾವು – ಅಪಾರ ಹಾನಿ, ನಷ್ಟ (6.2 Magnitude earth quake in china – 111 dead – massive damaģe loss)

ಮಂಗಳೂರು (ಬೀಜಿಂಗ್‌): ವಾಯವ್ಯ ಚೀನಾದ ಗನ್ಸು ಮತ್ತು ಕಿಂಗ್‌ಜೈ ‍ಪ್ರಾಂತ್ಯದಲ್ಲಿ ಡಿ.18ರ ಮಧ್ಯರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, 111 ಮಂದಿ ಮೃತಪಟ್ಟಿದ್ದಾರೆ. ವಿಕ್ಟರ್‌ ಮಾಪನದಲ್ಲಿ ಭೂಕಂಪದ ತೀವ್ರತೆ 6.2 ದಾಖಲಾಗಿದೆ.

ಮಧ್ಯರಾತ್ರಿ 11.59ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಗನ್ಸು ಪ್ರಾಂತ್ಯದ ಲಿಯುಗೌ ಟೌನ್‌ಶಿಪ್‌ ಬಳಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ ಎಂದು ಚೀನಾದ ಭೂಕಂಪನ ನೆಟ್‌ವರ್ಕ್‌ ಸೆಂಟರ್‌ ತಿಳಿಸಿದೆ.

ಭೂಕಂಪದಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡು ನೀರಿನ ಸಮಸ್ಯೆ ಉಂಟಾಗಿದೆ. ಮನೆಗಳು, ರಸ್ತೆಗಳು ಸೇರಿದಂತೆ ಇತರ ಮೂಲಸೌಕರ್ಯಗಳು ಹಾನಿಗೊಳಗಾಗಿರುವುದರ ಕುರಿತು ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ಸುಮಾರು 88 ಅಗ್ನಿಶಾಮಕ ವಾಹನಗಳೊಂದಿಗೆ 580 ಸಿಬ್ಬಂದಿ, ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಪಳಗಿರುವ 12 ಶ್ವಾನಗಳು ಹಾಗೂ 10,000ಕ್ಕೂ ಹೆಚ್ಚು ಉಪಕರಣಗಳನ್ನು ವಿಪತ್ತು ಪ್ರದೇಶಕ್ಕೆ ರವಾನಿಸಿರುವುದಾಗಿ ಪ್ರಾಂತೀಯ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಿಳಿಸಿದೆ. ಭೂಕಂಪ ವಯಲದ ರಸ್ತೆ ಸಂಚಾರ ಮತ್ತು ಸರಕು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರೈಲ್ವೆ ಹಳಿಗಳ ಸುರಕ್ಷತಾ ಪರಿಶೀಲನೆಗೆ ರೈಲ್ವೆ ಪ್ರಾಧಿಕಾರ ಆದೇಶಿಸಿದೆ.

ಭೂಕಂಪ ಸಂಭವಿಸಿರುವ ಪ್ರದೇಶಗಳಿಗೆ ಗನ್ಸುವಿನ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಹು ಚಾಂಗ್‌ಶೆಂಗ್‌ ಮತ್ತು ಗವರ್ನರ್‌ ರೆನ್‌ ಝೆನ್ಹೆ ಭೇಟಿ ನೀಡಿ, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದ್ದಾರೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಭೂಕಂಪ ಪ್ರದೇಶಗಳಲ್ಲಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here