ಕಾರು- ಬೈಕ್ ಅಪಘಾತ – ವಿದ್ಯಾರ್ಥಿ ಮೃತ್ಯು

ಮಂಗಳೂರು (ಕಾಸರಗೋಡು): ಕಾರು ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿ ಮೃತಪಟ್ಟ ಘಟನೆ ಡಿ.18ರಂದು ಮಧ್ಯಾಹ್ನ ಬೇಕಲ ಠಾಣಾ ವ್ಯಾಪ್ತಿಯ ಚೆಮ್ನಾಡ್ ಬಳಿ ನಡೆದಿದೆ. ಚೆಮ್ನಾಡ್ ಕೋಳಿಯಡ್ಕ ದ ಸಫ್ರಜುಲ್ ಅಮಾನ್ (20) ಮೃತ ಪಟ್ಟ ವಿದ್ಯಾರ್ಥಿಯಾಗಿದ್ದಾನೆ. ಗಂಭೀರ ಗಾಯಗೊಂಡ ಈತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾನೆ. ಈತ ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

LEAVE A REPLY

Please enter your comment!
Please enter your name here