ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ-ಜೀಪು ಮತ್ತು ಲಾರಿ ಮುಖಾಮುಖಿ ಡಿಕ್ಕಿ-ಮಗು ಸಹಿತ ನಾಲ್ವರು ಮೃತ್ಯು

ಮಂಗಳೂರು(ಕಲಬುರಗಿ): ಕಮಾಂಡರ್ ಜೀಪ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ಐದು ವರ್ಷದ ಮಗು ಸಹಿತ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಅಫ್ಝಲ್ ಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿ.20ರ ತಡರಾತ್ರಿ ನಡೆದಿದೆ.

ಮಾಡ್ಯಾಳ ಗ್ರಾಮದ ಸಂತೋಷ ಹೂವಣ್ಣ ಗೌಡಗಾಂವ (40), ಶಂಕರ ದೇವಪ್ಪ ಜಳಕಿ (55), ಸಿದ್ದಮ್ಮ ಶಂಕರ ಜಳಕಿ ಮತ್ತು ಹುಚ್ಚಪ್ಪ ಮಹಾಂತೇಶ ಜಳಕಿ (5) ಮೃತಪಟ್ಟವರು. ಮಗುವಿನ ತಾಯಿ ಪೂಜಾ ಮಹಾಂತೇಶರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಅಫ್ಝಲ್ ಪುರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

 

LEAVE A REPLY

Please enter your comment!
Please enter your name here