ಮಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವಗೌಡರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಲೋಕಸಭಾ ಸಮರಕ್ಕೆ ಅಣಿಯಾಗಿರುವ ಜೆಡಿಎಸ್ ಬಿಜೆಪಿಯ ಉಭಯ ನಾಯಕರ ಮಧ್ಯೆ ಮಾತುಕತೆ ನಡೆದಿದೆ.
ಎಚ್ ಡಿ ದೇವೇಗೌಡರನ್ನು ಆತ್ಮೀಯವಾಗಿ ಬರಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ, ದೇವೇಗೌಡರನ್ನು ಕುಳ್ಳರಿಸಿ ಮಾಜಿ ಮುಖ್ಯಮಂತ್ರಿ ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಎಚ್ ಡಿ ರೇವಣ್ಣರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಮಾತುಕತೆ ವೇಳೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ 6 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಹಾಸನ, ತುಮಕೂರು, ಮೈಸೂರು ಕೊಡಗು, ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಸೀಟುಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ ಎಂದು ಹೇಳಲಾಗಿದೆ. ರಾಷ್ಟ್ರದ ಪ್ರಗತಿಗೆ ದೇವೇಗೌಡರ ಅನುಕರಣೀಯ ಕೊಡುಗೆಯನ್ನು ಭಾರತವು ಬಹಳವಾಗಿ ಗೌರವಿಸುತ್ತದೆ. ನೀತಿ ವಿಷಯಗಳ ಕುರಿತು ಅವರ ಆಲೋಚನೆಗಳು ಒಳನೋಟವುಳ್ಳವು ಮತ್ತು ಭವಿಷ್ಯದ ಯೋಜನೆ ಎಂದು ಎಕ್ಸ್ ನಲ್ಲಿ ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.