ಕಲ್ಲಡ್ಕ ಭಟ್ ವಿರುದ್ಧ ಪ್ರತಿಭಟಿಸಲು ಅನುಮತಿ ಕೇಳಿದ ಮಹಿಳೆಯರಿಗೆ ಪೊಲೀಸರಿಂದ ನೋಟೀಸ್- ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ‌

ಮಂಗಳೂರು: ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, ದ್ವೇಷ ಭಾಷಣದ ದೊಡ್ಡ ಇತಿಹಾಸವನ್ನೇ ಹೊಂದಿರುವ ಪ್ರಭಾಕರ್ ಭಟ್ ಅವರನ್ನು ಬಂಧಿಸಲು ಇದುವರೆಗೆ ಧೈರ್ಯ ತೋರದ ಪೋಲೀಸ್ ಇಲಾಖೆ, ಹೇಳಿಕೆ ವಿರುದ್ಧ ಪ್ರತಿಭಟಿಸಲು ಮುಂದಾದ ಮಹಿಳೆಯರನ್ನು ಠಾಣಿಯಲ್ಲಿ ದಿನವಿಡೀ ಸತಾಯಿಸಿದ್ದಲ್ಲದೆ, ಮರುದಿನ ನೋಟೀಸು ಜಾರಿಗೊಳಿಸಿರುವುದು ಅಕ್ಷಮ್ಯ ಎಂದು ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಕಲ್ಲಡ್ಕದಲ್ಲಿ ಮಂಗಳವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಕೂಡ ಶಾಂತಿಯುತ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಪೊಲೀಸ್ ಇಲಾಖೆ ಮಹಿಳೆಯರ ಮೇಲೆ ಸೆಕ್ಷನ್ 107 ರಡಿ ಕೇಸ್ ದಾಖಲಿಸಿದೆ. ಇದನ್ನು ವಿಮೆನ್ ಇಂಡಿಯ ಮೂವ್ಮೆಂಟ್ ತೀವ್ರವಾಗಿ ಖಂಡಿಸುತ್ತದೆ ಮತ್ತು ಕಾನೂನು ಹೋರಾಟದ ಮೂಲಕ ಎದುರಿಸಲಿದಿದ್ದೇವೆ ಎಂದು ವಿಮ್‌ ರಾಜ್ಯಾಧ್ಯಕ್ಷೆ ಹೇಳಿದ್ದಾರೆ.

ಸಬಲೀಕರಣದ ಬಗ್ಗೆ ,ಕಾನೂನು ಸುವ್ಯವಸ್ಥೆ ಬಗ್ಗೆ, ಸಾಂವಿಧಾನಿಕ ನ್ಯಾಯದ ಬಗ್ಗೆ ಮಾತುಗಳನ್ನಾಡುವ ಸರ್ಕಾರಕ್ಕೆ ಇಂದಿನ ತನಕ ಆರೋಪಿಯೊಬ್ಬನನ್ನು ಬಂಧಿಸಲು ಸಾಧ್ಯವಾಗದಿರುವುದು ವಿಪರ್ಯಾಸ. ಸರಕಾರ ಬಿಜೆಪಿಯ ಐಟಿ ಸೆಲ್ ಗೆ ಬೆದರಿದಂತೆ ಕಾಣುತ್ತದೆ. ಮಾತ್ರವಲ್ಲ ಮುಂಬರುವ ಲೋಕಸಭಾ ಚುನಾವಣೆಗೆ ಮತ ಬೇಟೆಗಾಗಿ ಮೃದು ಹಿಂದುತ್ವಕ್ಕೆ ಮಣೆ ಹಾಕಿರುವ ಕಾಂಗ್ರೆಸ್ ಸರ್ಕಾರ ಆರ್ ಎಸ್ ಎಸ್ ನಾಯಕರನ್ನು ಬಂಧಿಸುವ ಇಚ್ಚಾಶಕ್ತಿಯನ್ನು ಹೊಂದಿಲ್ಲ. ತನ್ನ ಚುನಾವಣಾ ರಾಜಕೀಯಕ್ಕಾಗಿ ಪ್ರಜಾಪ್ರಭುತ್ವ ಸಂವಿಧಾನ ಮತ್ತು ನ್ಯಾಯಗಳನ್ನು ಬಲಿ ನೀಡುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ನಿಲುವಾಗಿದೆ ಎಂದು ಹೇಳಿದ್ದಾರೆ. ಸರಕಾರಕ್ಕೆ ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ನೈಜ ಕಾಳಜಿ, ನಂಬಿಕೆ, ಪ್ರೇಮ ಇರುವುದಾದರೆ ತಕ್ಷಣ ಆರೋಪಿಯನ್ನು ಬಂಧಿಸಲಿ. ಮಹಿಳೆಯರ ಮೇಲೆ 107 ರಡಿ ನೋಟೀಸ್ ಕಳುಹಿಸಿರುವ ಅಧಿಕಾರಿಯ ವಿರುದ್ಧ ಕೋರ್ಟ್ನಲ್ಲಿ ಪ್ರಶ್ನಿಸಲಿದ್ದೇವೆ. ಅಧಿಕಾರಿ ವರ್ಗ ಮಹಿಳೆಯರ ಮೇಲೆ ನಡೆಸಿದ ದರ್ಪವನ್ನು ಕಾನೂನು ಹೋರಾಟದ ಮೂಲಕ ಎದುರಿಸಲಿದಿದ್ದೇವೆ ಎಂದು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here