ಫೆ.13ರಿಂದ ಪ್ರಥಮ ಪಿಯು ಪರೀಕ್ಷೆ-ವೇಳಾಪಟ್ಟಿ ಪ್ರಕಟ

ಮಂಗಳೂರು(ಬೆಂಗಳೂರು): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 2024ರ ಫೆ.13ರಿಂದ 28ರ ವರೆಗೆ ನಡೆಯಲಿದೆ.

ಫೆ.13 ರಂದು ಕನ್ನಡ, ಅರೇಬಿಕ್, ಫೆ.14 ರಂದು ಹಿಂದಿ, ಫೆ.15ರಂದು ರಾಜ್ಯಶಾಸ, ಸಂಖ್ಯಾಶಾಸ, ಫೆ.16 ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆೃಂಡ್ ವೆಲ್‌ವೆಸ್, ಫೆ.17 ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ, ಭೂಗರ್ಭಶಾಸ, ಗೃಹ ವಿಜ್ಞಾನ, ಫೆ.19ರಂದು ಇತಿಹಾಸ, ಭೌತಶಾಸ, ಫೆ.20ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ,‌ ಫ್ರೆಂಚ್, ಫೆ.21 ರಂದು ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ, ಫೆ.22 ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಫೆ.23 ರಂದು ಗಣಿತ, ಶಿಕ್ಷಣಶಾಸ್ತ್ರ, ಫೆ.24 ರಂದು ಅರ್ಥಶಾಸ್ತ್ರ, ಫೆ.26 ರಂದು ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ, ಫೆ.27 ರಂದು ಇಂಗ್ಲಿಷ್, ಫೆ.28 ರಂದು ಭೂಗೋಳಶಾಸ್ತ್ರ ಮತ್ತು ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಎಲ್ಲಾ ಪರೀಕ್ಷೆಗಳು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿದೆ. 80 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನವಿರಲಿದೆ ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

 

 

LEAVE A REPLY

Please enter your comment!
Please enter your name here