ಫ್ಯಾನ್ ಗೆ ನೇಣು ಬಿಗಿದು ಯುವತಿ ಆತ್ಮಹತ್ಯೆ-ಸಾವಿನ ಹಿಂದಿನ ರಹಸ್ಯ ಭೇದಿಸಲು ಮುಂದಾದ ಪೊಲೀಸರು

ಮಂಗಳೂರು: ಯುವತಿಯೋರ್ವಳು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡು ಬಂದ್ಯೋಡು ಸಮೀಪದ ಆಡ್ಕ ಎಂಬಲ್ಲಿ ನಡೆದಿದೆ. ಅಡ್ಕದ ಫ್ಲ್ಯಾಟ್ ನಲ್ಲಿ ವಾಸವಾಗಿರುವ ಬದ್ರುದ್ದೀನ್ ರವರ ಪುತ್ರಿ ರೆನಾ ಫಾತಿಮಾ (19) ಮೃತಪಟ್ಟ ಯುವತಿ.

ಡಿ.30ರ ರಾತ್ರಿ ಮಲಗಿದ್ದ ಈಕೆ ಮರುದಿನ ಬೆಳಿಗ್ಗೆ ಮನೆಯವರು ಎದ್ದಾಗ ನಾಪತ್ತೆಯಾಗಿದ್ದಳು. ಗಾಬರಿಗೊಂಡ ಮನೆಯವರು ಹುಡುಕಾಟ ನಡೆಸಿದ್ದಾರೆ. ಇನ್ನೊಂದು ಕೋಣೆಯ ಬಾಗಿಲು ಒಳಗಿನಿಂದ ಚಿಲಕ ಜಡಿದ ಸ್ಥಿತಿಯಲ್ಲಿದ್ದ ಕಾರಣ ಪರಿಸರ ವಾಸಿಗಳು ಹಾಗೂ ಮನೆಯವರು ಬಾಗಿಲು ಮುರಿದು ನೋಡಿದ್ದಾರೆ. ಈ ವೇಳೆ ರೆನಾ ಫಾತಿಮಾ ದೇಹ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಹಿನ್ನಲೆಯಲ್ಲಿ ರೆನಾ ಫಾತಿಮಾಳ ಮೊಬೈಲ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here