ಟೋಕಿಯೋ ರನ್‌ವೇನಲ್ಲಿ ವಿಮಾನಗಳ ಡಿಕ್ಕಿ-ಹೊತ್ತಿ ಉರಿದ 360ಕ್ಕೂ ಹೆಚ್ಚು ಜನರಿದ್ದ ವಿಮಾನ

ಮಂಗಳೂರು(ಟೋಕಿಯೋ): ಜಪಾನ್ ರಾಜಧಾನಿ ಟೊಕಿಯೊದ ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ ವೇನಲ್ಲಿ ಜಪಾನ್ ಏರ್‌ಲೈನ್‌ ವಿಮಾನವೊಂದು ಜಪಾನ್ ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ 360ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಜಪಾನ್ ಏರ್‌ಲೈನ್ಸ್‌ನ ಏರ್‌ಬಸ್ ಎ350 ವಿಮಾನ ರನ್‌ವೇನಲ್ಲಿಯೇ ಹೊತ್ತಿ ಉರಿದಿದೆ.

ವಿಮಾನ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ದೃಶ್ಯಗಳು ಇಂಟರ್‌ನೆಟ್‌ನಲ್ಲಿ ಹರಿದಾಡಿದ್ದು, ವಿಮಾನ ನಿಲ್ದಾಣದ ಅಗ್ನಿಶಾಮಕ ಪಡೆ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ. ಸಾವು–ನೋವುಗಳ ವಿವರ ಇನ್ನೂ ತಿಳಿದು ಬಂದಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ. ಪ್ರಯಾಣಿಕರಿದ್ದ ಈ ವಿಮಾನ ಶಿನ್‌ ಚಿತೋಸ್ ನಿಂದ ಟೊಕಿಯೊಕ್ಕೆ ಬರುತ್ತಿತ್ತು. ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 379 ಜನ ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಎಪಿ ಸುದ್ದಿಸಂಸ್ಥೆಯ ಇತ್ತೀಚಿನ ವರದಿ ತಿಳಿಸಿದೆ. ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಜಪಾನ್‌ನ ಭಾರಿ ಜನದಟ್ಟಣೆಯ ವಿಮಾನ ನಿಲ್ದಾಣವಾಗಿದೆ. ಹೊಸ ವರ್ಷದ ಪ್ರಯುಕ್ತ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿತ್ತು ಎಂದು ತಿಳಿಸಿದೆ.

 

LEAVE A REPLY

Please enter your comment!
Please enter your name here