ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಮೆ ರಚನೆಗೆ ಯೋಗಿ ಅನುಮೋದನೆ-13 ಸಾವಿರ ಟನ್‌ ತೂಕದ, 823 ಅಡಿ ಎತ್ತರದ ಶ್ರೀ ರಾಮನ ಪ್ರತಿಮೆ ಸ್ಥಾಪನೆ

ಮಂಗಳೂರು(ಅಯೋಧ್ಯೆ): ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ಭರದ ಸಿದ್ಧತೆಗಳ ನಡುವೆ ವಿಶ್ವದ ಅತಿ ಎತ್ತರದ ಶ್ರೀ ರಾಮನ ಪ್ರತಿಮೆ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ.

823 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಸರಯೂ ನದಿ ದಡದಲ್ಲಿ ಸ್ಥಾಪನೆ ಮಾಡಲಾಗುತ್ತಿದ್ದು, ಈ ಪ್ರತಿಮೆಯು ಪ್ರಸ್ತುತ ಹರ್ಯಾಣದ ಮಾನೇಸರ್ ನಲ್ಲಿರುವ ಕಾರ್ಖಾನೆಯಲ್ಲಿ ತಯಾರಾಗುತ್ತಿದೆ. ಹರ್ಯಾಣದ ಖ್ಯಾತ ಶಿಲ್ಪಿ ನರೇಂದರ್ ಕುಮಾವತ್ ಅವರಿಗೆ ಪ್ರತಿಮೆ ರಚಿಸುವ ಹೊಣೆಯನ್ನು ವಹಿಸಲಾಗಿದೆ. 13,000 ಟನ್ ತೂಕದ ಶ್ರೀರಾಮನ ಪ್ರತಿಮೆಯು ವಿಶ್ವದ ಅತಿ ಎತ್ತರದ ಪ್ರತಿಮೆಯಾಗುವುದ ಜೊತೆಗೆ ವಿಶ್ವ ದಾಖಲೆ ನಿರ್ಮಿಸಲಿದೆ. ಈ ಪ್ರತಿಮೆಯನ್ನು ಐದು ಪವಿತ್ರ ಲೋಹಗಳು ಅಥವಾ ಪಂಚ ಧಾತುಗಳ ಸಂಯೋಜನೆಯಿಂದ ರಚಿಸಲಾಗುತ್ತದೆ ಎಂದು ಹೇಳಲಾಗಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಶ್ರೀರಾಮನ ಪ್ರತಿಮೆಯ ಮಾದರಿಗೆ ಈಗಾಗಲೇ ಅನುಮೋದನೆ ಸೂಚಿಸಿದ್ದು, ಪ್ರತಿಮೆ ನಿರ್ಮಾಣಕ್ಕೆ 3,000 ಕೋಟಿ ರೂ. ಬಜೆಟ್ ನ ಅಗತ್ಯವಿದೆ.

LEAVE A REPLY

Please enter your comment!
Please enter your name here