ಮಂಗಳೂರು: ಮಂಗಳೂರು ನಗರ ಪೊಲೀಸ್ ವತಿಯಿಂದ `ಡ್ರಗ್ಸ್ ಮುಕ್ತ ಕರ್ನಾಟಕ’ ಸಂಬಂಧ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ ಹಿನ್ನಲೆಯಲ್ಲಿ ಡೆಕತ್ಲೋನ್, ಮಂಗಳೂರು ರನ್ನರ್ಸ್ ಕ್ಲಬ್, ಝೀಯುಸ್ ಫಿಟ್ನೆಸ್ ಕ್ಲಬ್, ವಿ ಆರ್ ಸೈಕ್ಲಿಂಗ್, ವೆರಿಟೊ ಮೀಡಿಯಾ ಮತ್ತು ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಜ.6ರಂದು ಬೆಳಿಗ್ಗೆ 7.00 ಗಂಟೆಗೆ ಮಂಗಳೂರು ನಗರದ ಟೌನ್‌ಹಾಲ್‌ನಿಂದ ಟಿ.ಎಂ.ಎ. ಪೈ ಕನ್ವೆನ್ಷನ್ ಹಾಲ್‌ವರೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ `ವಾಕ್ ರನ್ ಸೈಕ್ಲೋಥಾನ್’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ನಗರದ 24 ಕಾಲೇಜ್‌ಗಳ ವಿದ್ಯಾರ್ಥಿಗಳು ಮತ್ತು ವಿವಿಧ ಸಂಸ್ಥೆಗಳ ಸದಸ್ಯರು ಸೇರಿದಂತೆ 1896 ಜನರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಕಾಲೇಜ್ ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಮಾದಕ ದ್ರವ್ಯ ವಿರೋಧಿ ಪ್ಲೇ ಕಾರ್ಡ್ ಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಸೈಕ್ಲೋಥಾನ್ ಟೌನ್‌ಹಾಲ್‌ನಿಂದ ಹೊರಟು-ಕ್ಲಾಕ್‌ಟವರ್-ಹಂಪನಕಟ್ಟೆ-ಎಲ್‌ಹೆಚ್‌ಹೆಚ್-ಮಿಲಾಗ್ರೀಸ್-ಫಳ್ನೀರ್-ಕಂಕನಾಡಿ-ಬೆಂದೂರ್‌ವೆಲ್-ಅಂಬೇಡ್ಕರ್ ವೃತ್ತ-ಬಂಟ್ಸ್ ಹಾಸ್ಟೆಲ್-ಪಿವಿಎಸ್ ವೃತ್ತ- ಟಿಎಂಎಪೈ ಕನ್ವೆನ್ಷನ್ ಹಾಲ್ ವರೆಗೆ (5 ಕಿ.ಮೀ) ಮತ್ತು ನಡಿಗೆ ಮತ್ತು ಓಟವು ಟೌನ್‌ಹಾಲ್‌ನಿಂದ ಹೊರಟು ಕ್ಲಾಕ್‌ಟವರ್-ಹಂಪನಕಟ್ಟೆ-ನವಭಾರತ ವೃತ್ತ-ಪಿವಿಎಸ್-ಟಿ.ಎಂ.ಎ ಪೈ ಕನ್ವೆನ್ಷನ್ ಹಾಲ್‌ವರೆಗೆ (2 ಕಿ.ಮೀ) ಸಾಗಿತು.