ಚಲಿಸುವ ರೈಲಿನಿಂದ ಬಿದ್ದ ಯುವತಿ-ಮಾಸ್ತಿ ಗುಡ್ಡೆಯ ರೈಲ್ವೆ ಹಳಿ ಸಮೀಪ ಮೃತದೇಹ ಪತ್ತೆ 

ಮಂಗಳೂರು(ಕಾಸರಗೋಡು): ಯುವತಿಯೋರ್ವಳು ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಪಳ್ಳಿಕೆರೆಯಲ್ಲಿ ಜ.6ರಂದು ನಡೆದಿದೆ.

ಮೃತ ಯುವತಿಯನ್ನು ಕಲ್ಪಟ್ಟ ಕಾವುಮಂದ ನಿವಾಸಿ ಐಶ್ವರ್ಯ ಜೋಸೆಫ್ (30) ಎಂದು ಗುರುತಿಸಲಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತದೇಹದ ಬಳಿ ಲಭಿಸಿದ ಪರ್ಸ್ ನಲ್ಲಿದ್ದ ಗುರುತು ಚೀಟಿಯಿಂದ ಯುವತಿಯ ಗುರುತು ಪತ್ತೆ ಹಚ್ಚಲಾಗಿದೆ. ಕೋಝಿಕ್ಕೋಡ್ ನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಯುವತಿ ನೇತ್ರಾವತಿ ರೈಲಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಪಳ್ಳಿಕೆರೆ ಮಾಸ್ತಿ ಗುಡ್ಡೆಯ ರೈಲ್ವೆ ಹಳಿ ಸಮೀಪ ಮೃತದೇಹ ಪತ್ತೆಯಾಗಿದ್ದು, ಬೆಳಿಗ್ಗೆ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here