ಆಕಸ್ಮಿಕವಾಗಿ ನಿಂಬೆಹಣ್ಣು ನುಂಗಿದ 9 ತಿಂಗಳ ಕಂದ-ಗಂಟಲಲ್ಲಿ ಲಿಂಬೆ ಸಿಲುಕಿ ಮಗು ಮೃತ್ಯು-ಮದುವೆಯಾಗಿ 7 ವರ್ಷದ ಬಳಿಕ ಜನಿಸಿದ್ದ ದಂಪತಿಗಳ ಮುದ್ದಿನ ಮಗು

ಮಂಗಳೂರು(ಆಂಧ್ರ ಪ್ರದೇಶ): ಮನೆಯಲ್ಲಿ ಆಟವಾಡುತ್ತಿದ್ದ ಮಗುವೊಂದು ನಿಂಬೆಹಣ್ಣು ನುಂಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟ ಧಾರುಣ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ. ಅನಂತಪುರ ಜಿಲ್ಲೆಯ ಪೆದ್ದವಡುಗೂರು ಮಂಡಲ ಮಲ್ಲೇನಿಪಲ್ಲಿಯದ ಸಾಕಿದೀಪ ಮತ್ತು ಗೋವಿಂದರಾಜ್​​​​ ದಂಪತಿಯ ಜಸ್ವಿತಾ (9 ತಿಂಗಳು) ಮೃತ ಮಗು.

ಎಂದಿನಂತೆ ಮನೆಯಲ್ಲಿ ತಾಯಿ ಸಾಕಿದೀಪ ಮನೆಕೆಲಸದಲ್ಲಿ ನಿರತರಾಗಿದ್ದರು. ಅದಾಗಿಯೂ ಆಗಾಗ ಆಡುತ್ತಿದ್ದ ಮಗುವಿನ ಕಡೆಯು ಗಮನಹರಿಸುತ್ತಿದ್ದರು. ಅದ್ಯಾವ ಕೆಟ್ಟ ಘಳಿಗೆಯೋ ತಾಯಿಯ ಗಮನಕ್ಕೆ ಬಾರದೆ ಮಗು ಜಗಲಿಯಲ್ಲಿದ್ದ ನಿಂಬೆಹಣ್ಣನ್ನು ತೆಗೆದು ನುಂಗಿ ಬಿಟ್ಟಿದೆ. ಆ ಬಳಿಕ ಮಗುವಿನ ಉಸಿರಾಟದಲ್ಲಿ ಏರುಪೇರಾಗಿದೆ. ಕೂಡಲೇ ತಾಯಿ ಗಂಟಲಿನಲ್ಲಿ ಸಿಲುಕಿದ್ದ ನಿಂಬೆಹಣ್ಣನ್ನು ತೆಗೆಯಲು ಯತ್ನಿಸಿದ್ದಾರೆ. ತೆಗೆಯಲು ಸಾಧ್ಯವಾಗದೇ ಇದ್ದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಆದಾಗಲೇ ಮಗು ಮೃತಪಟ್ಟಿದೆ ಎಂದಿದ್ದಾರೆ. ಸಾಕಿದೀಪ ಮತ್ತು ಗೋವಿಂದರಾಜ್ ದಂಪತಿಗೆ ಮದುವೆಯಾದ 7 ವರ್ಷದ ಬಳಿಕ ಜಸ್ವಿತಾ ಜನಿಸಿದ್ದಳು. ಆಕಸ್ಮಿಕ ದುರಂತದಲ್ಲಿ ಮಗು ಮೃತಪಟ್ಟಿರುವುದು ಇಡೀ ಕುಟುಂಬವನ್ನು ಶೋಕದಲ್ಲಿ ಮುಳುಗಿಸಿದೆ.

 

LEAVE A REPLY

Please enter your comment!
Please enter your name here