ಗುಜರಾತ್‌ನ ವಡೋದರಾದಲ್ಲಿ ಮುಳುಗಿದ ದೋಣಿ – 14 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಸೇರಿ 16 ಮಂದಿ ಮೃತ್ಯು

ಮಂಗಳೂರು (ವಡೋದರಾ): ಗುಜರಾತ್‌ನ ವಡೋದರಾದ ಹರಣಿ ಸರೋವರದಲ್ಲಿ ದೋಣಿ ಮುಳುಗಿ ವಿದ್ಯಾರ್ಥಿಗಳು ಸೇರಿದಂತೆ 14 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.

ದೋಣಿಯಲ್ಲಿ ಖಾಸಗಿ ಶಾಲೆಯ 24 ವಿದ್ಯಾರ್ಥಿಗಳು ಸೇರಿದಂತೆ 27 ಮಂದಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ದೋಣಿ ಮಗುಚಿಕೊಂಡಿದ್ದು, ಪ್ರವಾಸ ತೆರಳಿದ್ದ 14 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ದುರಂತದಲ್ಲಿ ಮೃತಪಟ್ಟಿದ್ದಾರೆ. ನಾಪತ್ತೆಯಾಗಿರುವ ಇತರರಿಗೆ ಶೋಧ ಕಾರ್ಯ ಮುಂದುವರಿದಿದೆ. ದುರಂತದಲ್ಲಿ ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳನ್ನು ಸಯಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಕ್ಕಳೆಲ್ಲ ಹತ್ತು ವರ್ಷದವರಾಗಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ದೋಣಿಯಲ್ಲಿ ತೆರಳಿದ್ದವರಲ್ಲಿ ಯಾರೂ ಜೀವರಕ್ಷಕ ಕವಚ ಧರಿಸಿರಲಿಲ್ಲ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here