ಜೈನ ಸಮುದಾಯ ಕಂಬಳಕ್ಕೆ ಬೆಂಬಲ ನೀಡಬಾರದು – ಜೈನಮುನಿ ಶ್ರೀ ಅಮೋಘಕೀರ್ತಿ ಮಹಾರಾಜ್

ಮಂಗಳೂರು (ಕಾರ್ಕಳ): ಅಹಿಂಸೆ, ಕರುಣೆ ಬಗ್ಗೆ ಜೈಕಾರ ಕೂಗುವ ಜೈನ ಸಮುದಾಯ ಪ್ರಾಣಿ, ಪಕ್ಷಿಗಳಿಗೆ ಹಿಂಸೆ ನೀಡುವುದನ್ನು ಬೆಂಬಲಿಸಬಾರದು. ಈ ಹಿನ್ನೆಲೆಯಲ್ಲಿ ಜೈನ ಸಮುದಾಯ ಕಂಬಳಕ್ಕೆ ಬೆಂಬಲ ನೀಡಬಾರದು ಎಂದು 108 ಮುನಿಶ್ರೀ ಅಮೋಘಕೀರ್ತಿ ಮಹಾರಾಜ್ ಹೇಳಿದ್ದಾರೆ.

ಕಾರ್ಕಳ ತಾಲೂಕಿನ ಕೆರೆ ಬಸದಿಯ ಪಂಚ ಕಲ್ಯಾಣ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ  ಮಾತನಾಡಿದ ಮಹಾರಾಜ್‌, ನಾವು ಬದುಕಲು ಬಿಡಿ ಎನ್ನುವುದನ್ನು ಸಾರುತ್ತೇವೆ. ಕಂಬಳವನ್ನು ಕಂಡರೆ ನಮಗೆ ದುಃಖವಾಗುತ್ತದೆ. ಜೈನರು ಈ ಕಂಬಳದಲ್ಲಿ ಭಾಗವಹಿಸಲೇಬಾರದು. ಕಂಬಳ ಬೆಂಬಲಿಸುವವರು ಪಾರ್ಶ್ವನಾಥ, ಮಹಾವೀರ, ಜೈನ ಧರ್ಮದ ಅನುಯಾಯಿಗಳು ಆಗಲಾರರು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here