ಇಸ್ರೊದಿಂದ ಅಯೋಧ್ಯೆ ರಾಮ ಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ

ಮಂಗಳೂರು(ಬೆಂಗಳೂರು): ಬಾಹ್ಯಾಕಾಶ ಉಪಗ್ರಹದಿಂದ ಸೆರೆ ಹಿಡಿಯಲಾದ ಅಯೋಧ್ಯೆ ರಾಮ ಮಂದಿರದ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಬಿಡುಗಡೆಗೊಳಿಸಿದೆ.

ಈ ಚಿತ್ರವನ್ನು ಹೈದರಾಬಾದ್‍ನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಕೇಂದ್ರವು ಹಂಚಿಕೊಂಡಿದೆ. ಕಳೆದ ವರ್ಷ ಡಿಸೆಂಬರ್ 16ರಂದು ಅಯೋಧ್ಯೆ ರಾಮ ಮಂದಿರದ ಸ್ಯಾಟಲೈಟ್ ಚಿತ್ರವನ್ನು ತೆಗೆಯಲಾಗಿದೆ. ದಶರಥ ಮಹಲ್, ಅಯೋಧ್ಯೆ ರೈಲ್ವೆ ನಿಲ್ದಾಣ ಹಾಗೂ ಸರಯುೂ ನದಿಯನ್ನು ಚಿತ್ರದಲ್ಲಿ ಕಾಣಬಹುದಾಗಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಜ.22ರಂದು ನಡೆಯಲಿದೆ.

LEAVE A REPLY

Please enter your comment!
Please enter your name here