ಹಸೆಮಣೆ ಏರಬೇಕಿದ್ದ ಯುವತಿ ಸ್ನಾನದ ಕೊಠಡಿಯಲ್ಲಿ ನೇಣಿಗೆ ಶರಣು

ಮಂಗಳೂರು(ಶಿವಮೊಗ್ಗ): ಮದುವೆಗೆ 13 ದಿನ ಬಾಕಿ ಇರುವಾಗ ಯುವತಿ‌ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ನಡೆದಿದೆ. 26 ವರ್ಷದ ಚೈತ್ರಾ ಮೃತ ಯುವತಿಯಾಗಿದ್ದು, ಮನೆಯ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಚೈತ್ರಾಳಿಗೆ ಫೆಬ್ರವರಿ 4 ರಂದು ವಿವಾಹ ನಿಗದಿಯಾಗಿತ್ತು. ಆದರೆ ಏಕಾಏಕಿ ಯುವತಿ ಸಾವಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರು ಮದುವೆ ಫಿಕ್ಸ್ ಮಾಡಿದ್ದ ಸಮಯದಲ್ಲಿ ಯುವತಿ ಮದುವೆ ಬೇಡವೆಂದು ವಿರೋಧ ಮಾಡಿದ್ದರೆಂದು, ಮನೆಯವರು ಯುವತಿ ಮನವೊಲಿಸಿ ಮದುವೆಗೆ ಒಪ್ಪಿಸಿದ್ದರೆಂದು ಹೇಳಲಾಗಿದೆ. ಎಂಕಾಂ ಪದವೀಧರೆಯಾಗಿರುವ ಚೈತ್ರಾ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್ ನಲ್ಲಿ ಉದ್ಯೋಗದಲ್ಲಿದ್ದು, ಮದುವೆ ಬೇಡ, ನನಗೆ ಆರೋಗ್ಯ ಸಮಸ್ಯೆ ಇದೆ ಎಂದು ಪೋಷಕರೊಂದಿಗೆ ಹೇಳಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.

LEAVE A REPLY

Please enter your comment!
Please enter your name here