ಸುಳ್ಯದಲ್ಲೂ ಶಾಸಕ ಅಶೋಕ್ ರೈ ಹವಾ – ಅಶೋಕ್ ರೈ ಬಳಿ ಸಮಸ್ಯೆ ಹೇಳಿಕೊಂಡ ಸುಳ್ಯ ನಾಗರಿಕರು..!

ಮಂಗಳೂರು/ಪುತ್ತೂರು : ಸುಳ್ಯದ ಕೆವಿಜಿ ಪುರಭವನದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡುರಾವ್‌ ಜನತಾ ದರ್ಶನ ನಡೆಸಿದ್ದಾರೆ. ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ‌ದ್ದು, ಸಚಿವರ ಬಳಿ ತಮ್ಮ ಅಹವಾಲನ್ನು ಸಲ್ಲಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಕಾರ್ಯಕ್ರಮ ಸಂಜೆ ತನಕವೂ ಮುಂದುವರೆದಿದೆ. ಕೆಲವು ಸಮಸ್ಯೆಗಳಿಗೆ ಸಚಿವರು ಸ್ಥಳದಲ್ಲೇ ಪರಿಹಾರವನ್ನು ಸೂಚಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಇಲಾಖಾ ಮಟ್ಟದ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುಳ್ಯದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್‌ ರೈ ಕೂಡ ಭಾಗವಹಿಸಿದ್ದರು.‌ ಶಾಸಕರು ಸಭೆಗೆ ಆಗಮಿಸುತ್ತಿದ್ದಂತೆಯೇ ಹಲವು‌ ಮಂದಿ ನಾಗರಿಕರು ಶಾಸಕರ ಬಳಿಯೂ ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ. ಸಚಿವರೊಂದಿಗೆ ತಮ್ಮ ಅಹವಾಲು ಸಲ್ಲಿಸಿದ ಸುಳ್ಯದ ಜನತೆ ಪುತ್ತೂರು ಶಾಸಕರನ್ನು ಸುತ್ತುವರಿದು ತಮ್ಮ ಅಹವಾಲಿನ ಬಗ್ಗೆ ವಿವರಣೆ ನೀಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು.

 

 

 

 

 

LEAVE A REPLY

Please enter your comment!
Please enter your name here