ಬಜ್ಪೆ ಎಎಸ್ಐ ರಾಮ ಪೂಜಾರಿಗೆ ರಾಷ್ಟ್ರಪತಿ ಪದಕ

ಮಂಗಳೂರು: ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ನೀಡುವ ರಾಷ್ಟ್ರಪತಿ ಸೇವಾ ಪದಕಕ್ಕೆ ಬಜ್ಪೆ ಪೊಲೀಸ್ ಉಪ-ನಿರೀಕ್ಷಕ ರಾಮ ಪೂಜಾರಿ ಆಯ್ಕೆಯಾಗಿದ್ದಾರೆ. 1993ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಇವರು ಬ್ರಹ್ಮಾವರ, ಸುಳ್ಯ, ಎಸ್‌ಪಿ ವಿಶೇಷ ಪತ್ತೆ ದಳ, ಮೂಡುಬಿದಿರೆ, ಮುಲ್ಕಿ, ಮಂಗಳೂರು ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಬಜ್ಪೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

30 ವರ್ಷದ ತನ್ನ ಸೇವಾವಧಿಯಲ್ಲಿ 35ಕ್ಕೂ ಮಿಕ್ಕ ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಮಹತ್ತರ ಪಾತ್ರ ವಹಿಸಿರುತ್ತಾರೆ. ಭೂಗತ ಪಾತಕಿಗಳು, ಭಯೋತ್ಪಾದಕ ಸಂಘಟನೆಯ ಸದಸ್ಯರನ್ನು ಬಂಧಿಸುವಲ್ಲಿಯೂ ಕೈಜೋಡಿಸಿದ್ದರು. ಮೂಡುಬಿದಿರೆ ಜೈನ ಬಸದಿ ಪ್ರಕರಣದ ಪ್ರಮುಖ ಆರೋಪಿಗಳ ಪತ್ತೆ, ಹಲವಾರು ಅಪರಾಧ ಪ್ರಕರಣಗಳು, ದರೋಡೆ, ಕಳ್ಳತನ, ಅತ್ಯಾಚಾರ ಪ್ರಕರಣಗಳ ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2014ರಲ್ಲಿ ಮುಖ್ಯಮಂತ್ರಿಯ ಚಿನ್ನದ ಪದಕ ಪಡೆದುಕೊಂಡಿದ್ದ ಇವರ ಸೇವೆಯನ್ನು ಪರಿಗಣಿಸಿ, ಈಗ 2024ರ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

 

LEAVE A REPLY

Please enter your comment!
Please enter your name here