ಮಂಗಳೂರು(ದೆಹಲಿ): ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ ಅಡಿಯಲ್ಲಿ ಐದು ವರ್ಷಗಳ ಕಾಲ ‘ಕಾನೂನುಬಾಹಿರ ಸಂಘ’ ಎಂದು ಕೇಂದ್ರ ಸರಕಾರ ಘೋಷಣೆ ಮಾಡಿದೆ. ಭಾರತದ ಸಾರ್ವಭೌಮತೆ, ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರಲು ಭಯೋತ್ಪಾದನೆ, ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕದಡುವಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ ತೊಡಗಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ಎಕ್ಸ್ನಲ್ಲಿ ತಿಳಿಸಿದೆ.
2014ರ ಫೆಬ್ರವರಿ 1ರಂದು ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ)ನ್ನು ನಿಷೇಧಿಸಲಾಯಿತು. ನಂತರ ಈ ನಿಷೇಧವನ್ನು 2019ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ಸಂಘಟನೆಯನ್ನು 5 ವರ್ಷಗಳ ಕಾಲ ಮತ್ತೆ ಯುಎಪಿಎ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿದೆ. ಈ ಸಂಘಟನೆ 1977ರಲ್ಲಿ ಸ್ಥಾಪನೆಯಾಗಿತ್ತು. ಉತ್ತರ ಪ್ರದೇಶದ ಅಲಿಗಢದ ವೆಸ್ಟರ್ನ್ ಇಲಿನಾಯ್ಸ್ ವಿಶ್ವವಿದ್ಯಾನಿಲಯದ ಮ್ಯಾಕೊಂಬ್‌ನ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಸಂಪರ್ಕಗಳ ಪ್ರಾಧ್ಯಾಪಕ ಮೊಹಮ್ಮದ್ ಅಹ್ಮದುಲ್ಲಾ ಸಿದ್ದಿಕಿ ಇದರ ಸ್ಥಾಪಕ ಅಧ್ಯಕ್ಷರಾಗಿದ್ದರು.
ಈ ಸಂಸ್ಥೆಯು ಭಾರತವನ್ನು ಇಸ್ಲಾಮಿಕ್ ಆಗಿ ಪರಿವರ್ತಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತದೆ. ಹಾಗೂ ಭಾರತದಲ್ಲಿರುವ ವಿದ್ಯಾರ್ಥಿಗಳನ್ನು ಈ ಕೆಲಸದಲ್ಲಿ ತೋಡಗಿಸಿಕೊಳ್ಳತ್ತದೆ ಎಂಬ ಕಾರಣಕ್ಕೆ 2001ರಲ್ಲಿ ಈ ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಣೆ ಮಾಡಿತ್ತು. ಮತ್ತು ಅನೇಕ ಬಾರಿ ಈ ಸಂಘಟನೆಯನ್ನು ನಿಷೇಧಿಸಲಾಗಿತ್ತು. ಸಿಮಿ ಸದಸ್ಯರು ಅನೇಕ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಹಲವಾರು ಪ್ರಕರಣಗಳು ಇದರ ಸದಸ್ಯರ ಮೇಲೆ ದಾಖಲಾಗಿದೆ. 2014ರಲ್ಲಿ ಮಧ್ಯಪ್ರದೇಶದ ಭೋಪಾಲ್ನಲ್ಲಿ ಜೈಲಿನ ಗೋಡೆ ಒಡೆದು ಪರಾರಿಯಾಗಿರುವ ಘಟನೆ, 2014ರಲ್ಲಿ ಬೆಂಗಳೂರಿನ ಎಂ ಚಿನ್ನವಾಮಿ ಸ್ಟೇಡಿಯಂ ಸ್ಫೋಟ, 2017 ರಲ್ಲಿ ಗಯಾ ಸ್ಫೋಟಗಳು ಹೀಗೆ ದೇಶದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಇವರ ಕೈವಾಡ ಇತ್ತು ಎಂದು ವರದಿ ಹೇಳಿದೆ. ಈ ಕಾರಣಕ್ಕಾಗಿ ಸಿಮಿ ಸಂಘಟನೆಯನ್ನು ನಿಷೇಧ ಮಾಡಲಾಗಿತ್ತು.