ʼಹ್ಯಾಟ್ರಿಕ್ ವಿಶ್ವಕಪ್ ಗೆದ್ದರೂ ಅಂಧ ಕ್ರಿಕೆಟಿಗರಿಗೆ ಬೆಳಕಾಗದ ಸರಕಾರʼ ವರದಿಗೆ ಸಂದ ಗೌರವ-ವಾರ್ತಾಭಾರತಿ ಪತ್ರಕರ್ತ ಬನ್ನೂರು ಇಬ್ರಾಹಿಂ ಖಲೀಲ್ ಗೆ ಕೆ. ಎ ನೆಟ್ಟಕಲಪ್ಪ ಪ್ರಶಸ್ತಿ

ಮಂಗಳೂರು(ಪುತ್ತೂರು): ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಈ ಹಿಂದೆ ಪುತ್ತೂರಿನ ಸುದ್ದಿ ಬಿಡುಗಡೆಯ ಪತ್ರಿಕೆ ವರದಿಗಾರರಾಗಿದ್ದು, ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ವರದಿಗಾರರಾಗಿರುವ ಪುತ್ತೂರಿನ ಬನ್ನೂರು ನಿವಾಸಿ ಇಬ್ರಾಹೀಂ ಖಲೀಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇಬ್ರಾಹೀಂ ಖಲೀಲ್

ಇಬ್ರಾಹೀಂ ಖಲೀಲ್ ಅವರ ʼಹ್ಯಾಟ್ರಿಕ್ ವಿಶ್ವಕಪ್ ಗೆದ್ದರೂ ಅಂಧ ಕ್ರಿಕೆಟಿಗರಿಗೆ ಬೆಳಕಾಗದ ಸರಕಾರʼ ಎಂಬ ಕ್ರೀಡಾ ವರದಿಗಾಗಿ ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಅತ್ಯುತ್ತಮ ಗ್ರಾಮಾಂತರ ವರದಿಗಾಗಿ ವಾರ್ತಾಭಾರತಿ ಪತ್ರಿಕೆಯ ಸಂಶುದ್ದೀನ್‌ ಎಣ್ಮೂರು ಅವರಿಗೆ ಜಿ.ನಾರಾಯಣ ಸ್ವಾಮಿ ಪ್ರಶಸ್ತಿ ಘೋಷಿಸಲಾಗಿದೆ. ವಾರಪತ್ರಿಕೆ ವಿಭಾಗದಲ್ಲಿ ಪುತ್ತೂರು ಅಡಿಕೆ ಪತ್ರಿಕೆಯ ನಾ ಕಾರಂತ ಪೆರಾಜೆ ಮತ್ತು ಸುಧಾ ವಾರಪತ್ರಿಕೆಯ ಪುತ್ತೂರು ರಾಘವೇಂದ್ರ ತೊಗರ್ಸಿ, ಮಂಗಳ ಎಂ ವಿ ವರ್ಗೀಸ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಜಯವಾಣಿ ಪತ್ರಿಕೆಯ ವರದಿಗಾರ ಪಿ ಬಿ ಹರೀಶ್‌ ರೈ ಕೆಯುಡಬ್ಲೂಜೆ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಫೆ. 3 ಮತ್ತು 4 ರಂದು ದಾವಣಗೆರೆಯಲ್ಲಿ ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here