ಶ್ರೀ ಮಹಾಮ್ಮಯಿ ದೇವಸ್ಥಾನದ ಬಳಿ ಘಟನೆ-ಕುಸಿದು ಬಿದ್ದ ನೀರಿನ ಟ್ಯಾಂಕ್- ತಾಯಿ ಮೃತ್ಯು, ಮಗಳಿಗೆ ಗಾಯ

ಮಂಗಳೂರು(ಕಾರ್ಕಳ): ನಂದಳಿಕೆ ಶ್ರೀ ಮಹಾಮ್ಮಯಿ ದೇವಸ್ಥಾನದಲ್ಲಿ ಜರುಗಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಪ್ರಸಾದ ರೂಪದಲ್ಲಿ ಭೋಜನ ಸೇವಿಸಿ ಹಾಳೆಯ ಪ್ಲೇಟ್ ಎಸೆಯಲು ಮುಂದಾದಾಗ ಟ್ಯಾಂಕ್ ಕುಸಿದು ಬಿದ್ದು ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಬೆಳ್ಮಣ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಲತಾ (50) ಪ್ರಾಣ ಕಳೆದುಕೊಂಡ ನತದೃಷ್ಟೆಯಾಗಿದ್ದಾರೆ. ಜ.30ರಂದು ನಂದಳಿಕೆ‌ಯ‌ ಶ್ರೀ ಮಹಾಮ್ಮಯಿ ದೇವಸ್ಥಾನದಲ್ಲಿ ಜರುಗಿದ್ಧ ವಾರ್ಷಿಕ ಮಾರಿಪೂಜೆ ಕಾರ್ಯಕ್ರಮದಲ್ಲಿ ಶ್ರೀಲತಾ ಪಾಲ್ಗೊಂಡಿದ್ದರು. ಈ ಘಟನೆಯಲ್ಲಿ ಶ್ರೀಲತಾ ಮೃತಪಟ್ಟಿದ್ದು, ಅವರ ಮಗಳು ಪೂಜಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ‌ ದಾಖಲಿಸಲಾಗಿದೆ.ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here