ಹುಡುಗಿಯರಿಗೆ ಕೀಟಲೆ, ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುತ್ತಿದ್ದ ಮಗ-ಹತಾಶೆಗೊಂಡ ತಂದೆಯಿಂದ ಪುತ್ರನ ಹತ್ಯೆ

ಮಂಗಳೂರು(ಹೊಸದಿಲ್ಲಿ): ತನ್ನ ಫೋನ್ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ ಹಾಗೂ ಶಾಲೆಯಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿದ್ದ ಮಗನ ವರ್ತನೆಯಿಂದ ಬೇಸತ್ತ ತಂದೆ, ಮಗನಿಗೆ ಪಾನೀಯದಲ್ಲಿ ವಿಷಬೆರೆಸಿ ನೀಡಿ ಕೊಂದ ಪ್ರಕರಣ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ತಂದೆ ವಿಜಯ ಬಟ್ಟು

ಕಳೆದ ತಿಂಗಳ 13ರಂದು ವಿಶಾಲ್ ಎಂಬ ಯುವಕನೊಬ್ಬ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಇದಾದ ಸ್ವಲ್ಪ ಸಮಯದ ಬಳಿಕ ಯುವಕನ ಮೃತದೇಹ ಪತ್ತೆಯಾಗಿತ್ತು. ಈ ಮೃತದೇಹ ನಾಪತ್ತೆಯಾಗಿದ್ದ ಯುವಕ ವಿಶಾಲ್ ನದ್ದು ಎನ್ನುವುದನ್ನು ಆತನ ಕುಟುಂಬ ದೃಢಪಡಿಸಿತ್ತು. ಈ ಸಾವು ವಿಷಪ್ರಾಶನದಿಂದ ಸಂಭವಿಸಿದೆ ಎಂದು ಪರೀಕ್ಷೆಯಿಂದ ತಿಳಿದು ಬಂದಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕುಟುಂಬದವರನ್ನು ವಿಚಾರಣೆಗೆ ಗುರಿಪಡಿಸಿದರು. ಅವರ ಹೇಳಿಕೆಯಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಕೊನೆಗೆ ಪೊಲೀಸರು ತಂದೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಚಾರಿಸಿದಾಗ, ತಮ್ಮ ದುಃಖವನ್ನು ಹಂಚಿಕೊಂಡ ತಂದೆ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.

ಮಗ ಚೆನ್ನಾಗಿ ಓದುತ್ತಿರಲಿಲ್ಲ. ಶಾಲೆಯಲ್ಲಿ ಹುಡುಗಿಯರನ್ನು ಕೀಟಲೆ ಮಾಡುತ್ತಿದ್ದ ಹಾಗೂ ಫೋನ್ ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ. ಮುಂದಿನ ದಾರಿ ನೋಡಿಕೊಳ್ಳುವಂತೆ ಮಗನಿಗೆ ತಿಳಿ ಹೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಶಾಲೆಯಿಂದಲೂ ದೂರುಗಳು ಬರುತ್ತಿದ್ದವು. ಇದರಿಂದ ಹತಾಶೆಗೊಂಡು ಮಗನನ್ನು ಸಾಯಿಸಿದ್ದಾಗಿ ತಂದೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಮಗನ ವರ್ತನೆಯಿಂದ ಬೇಸತ್ತ ತಂದೆ ಜನವರಿ 13ರಂದು ದ್ವಿಚಕ್ರವಾಹನದಲ್ಲಿ ತುಳಜಾಪುರ ರಸ್ತೆಗೆ ಕರೆದೊಯ್ದು ತಂಪು ಪಾನೀಯಕ್ಕೆ ವಿಷಬೆರೆಸಿ ಮಗನಿಗೆ ನೀಡಿದ್ದಾರೆ. ತಕ್ಷಣ ಪ್ರಜ್ಞೆ ಕಳೆದುಕೊಂಡ ವಿಶಾಲ್ ನನ್ನು ಅಲ್ಲೇಬಿಟ್ಟು ತಂದೆ ಮನೆಗೆ ಬಂದಿದ್ದರು. ಆರೋಪಿ ತಂದೆ ವಿಜಯ ಬಟ್ಟು ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

LEAVE A REPLY

Please enter your comment!
Please enter your name here