‘ಐ ಮಿಸ್ ಯೂ ತೆಂಡೂಲ್ಕರ್’ ಟೀ ಶರ್ಟ್ ಧರಿಸಿದ್ದ ಅಭಿಮಾನಿಯನ್ನು ಹಿಂಬಾಲಿಸಿ ಭೇಟಿ ಮಾಡಿದ ಸಚಿನ್ ತೆಂಡೂಲ್ಕರ್‌ – ವೀಡಿಯೋ ವೈರಲ್

ಮಂಗಳೂರು/ಮುಂಬೈ: ‘ಐ ಮಿಸ್ ಯೂ ತೆಂಡೂಲ್ಕರ್’ ಎಂಬ ಬರಹವಿರುವ ಟೀ ಶರ್ಟ್ ಧರಿಸಿ ಹೋಗುತ್ತಿದ್ದ ವ್ಯಕ್ತಿಯನ್ನು ಸಚಿನ್‌ ತೆಂಡೂಲ್ಕರ್‌ ಭೇಟಿ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಭಾರತೀಯ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್ ದಾರಿಯಲ್ಲಿ ಹೋಗುತ್ತಿದ್ದ ವೇಳೆ ‘ಐ ಮಿಸ್ ಯೂ ತೆಂಡೂಲ್ಕರ್’ ಎಂಬ ಬರಹವಿದ್ದ ‘ಮುಂಬೈ ಇಂಡಿಯನ್ಸ್’ ಐಪಿಎಲ್ ತಂಡದ ಜೆರ್ಸಿ ಧರಿಸಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವ್ಯಕ್ತಿಯನ್ನು ಸಚಿನ್‌ ತೆಂಡೂಲ್ಕರ್‌ ಹಿಂಬಾಲಿಸಿ ಭೇಟಿ ಮಾಡಿದ್ದಾರೆ. ಈ ಭೇಟಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಡಿಯೋದಲ್ಲಿ ಸಚಿನ್ ಪ್ರಯಾಣಿಸುತ್ತಿದ್ದ ಕಾರಿನ ಪಕ್ಕದಲ್ಲಿಯೇ ಅಭಿಮಾನಿ ಎನ್ನಲಾದ ವ್ಯಕ್ತಿ ಟೀ ಶರ್ಟ್‌ ಧರಿಸಿ ಸಾಗುತ್ತಿರುವುದು ಕಂಡು ಬರುತ್ತದೆ. ದ್ವಿ ಚಕ್ರ ವಾಹನದ ಹಿಂದೆಯೇ ಸಾಗಿದ ಸಚಿನ್, ಕಾರನ್ನು ಬೈಕ್ ಸವಾರ ಅಭಿಮಾನಿಯ ಸನಿಹಕ್ಕೆ ಕೊಂಡೊಯ್ಯುವಂತೆ ತಮ್ಮ ಚಾಲಕನಿಗೆ ಸೂಚಿಸುತ್ತಾರೆ. ಅದರಂತೆ ಕಾರು ಚಾಲಕ ಆ ಬೈಕ್ ಸವಾರನ ಬಳಿಗೆ ಕಾರು ಕೊಂಡೊಯ್ದಾಗ ಸಚಿನ್ ಕಾರಿನ ಕಿಟಕಿ ಗಾಜನ್ನು ಇಳಿಸುತ್ತಾರೆ. ಕಾರಿನಲ್ಲಿದ್ದ ಸಚಿನ್‌ರನ್ನು ಕಂಡ ಅಭಿಮಾನಿ ಸಂತೋಷಕ್ಕೆ ಪಾರವೇ ಇರಲಿಲ್ಲ.

ತನ್ನ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಕಾರಿನ ಬಳಿಗೆ ಬಂದ ಅಭಿಮಾನಿಯನ್ನು ಸಚಿನ್ ಮಾತನಾಡಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ‘ಅಭಿಮಾನಿಗಳು ಇಂದಿಗೂ ನನ್ನ ಮೇಲೆ ಪ್ರೀತಿ ಇರಿಸಿರುವುದು ನೋಡಿದರೆ ಬದುಕು ಸಾರ್ಥಕ ಅನಿಸುತ್ತದೆ’ ಎಂದು ಕ್ರಿಕೆಟ್‌ ದಂತ ಕಥೆ ಸಚಿನ್‌ ತೆಂಡೂಲ್ಕರ್‌ ಪ್ರತಿಕ್ರಿಯಿಸಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here