ಮಂಗಳೂರು: ಮಂಗಳೂರು ನಗರದ ಬಲ್ಮಠ ನ್ಯೂ ರೋಡ್ ಬಳಿ ರಾತ್ರಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅತ್ತಾವರದ ಆದಿತ್ಯ ಕೆ (29) ಮತ್ತು ಅಡ್ಯಾರ್ಪದವಿನ ರೋಹನ್ ಸಿಕ್ವೇರ(33) ಎಂದು ಗುರುತಿಸಲಾಗಿದೆ.
ಅವರಿಂದ ಸುಮಾರು 50 ಸಾವಿರ ರೂ. ಮೌಲ್ಯದ 27 ಗ್ರಾಂ ಹೈಡೋವಿಡ್ ಗಾಂಜಾ, ಸುಮಾರು 1 ಲಕ್ಷ ರೂ. ಮೌಲ್ಯದ 2 ಕೆಜಿ 95 ಗ್ರಾಂ ಗಾಂಜಾ, 16,800 ರೂ. ಮೌಲ್ಯದ ಎಲ್ಎಸ್ಡಿ ಸ್ಟ್ಯಾಂಪ್, 2 ಮೊಬೈಲ್, ಕಾರು ವಶಪಡಿಸಿಕೊಂಡಿದ್ದು, ಬಂದರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ