ಮಂಗಳೂರು: ಇತ್ತೀಚಿಗೆ ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಪರೀಕ್ಷೆಗಳು ನಡೆಯದೆ ಆಕ್ರಮ ಎಸಗುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಹತ್ವದ ಮಸೂದೆ ಅಂಗೀಕರಿಸಿದೆ.
ಯುಪಿಎಸ್ಸಿ, ಬ್ಯಾಂಕಿಂಗ್, ಎಸ್ಎಸ್ಸಿ, ರೈಲ್ವೇ ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳಲ್ಲಿ ಆಕ್ರಮ ತಡೆಯಲು ಬಿಗಿ ಕಾನೂನು ರೂಪಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಉತ್ತರ ಪತ್ರಿಕೆ ತಿದ್ದುವಿಕೆ ಮಾಡಿದಲ್ಲಿ 10 ವರ್ಷಗಳ ಕಠಿಣ ಸಜೆ ಹಾಗೂ ಒಂದು ಕೋಟಿ ದಂಡ ವಿಧಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.