ಸುಳ್ಯಕ್ಕೆ ಬಂದಿದ್ದ ಯುವಕ ನಾಪತ್ತೆ- ಅಜ್ಜಿ ಮನೆಯಿಂದ ಮನೆಗೆ ತೆರಳುವುದಾಗಿ ಹೊರಟಿದ್ದ ಯುವಕ-ಸುಳ್ಯ ಠಾಣೆಯಲ್ಲಿ ದೂರು ದಾಖಲು 

ಮಂಗಳೂರು(ಪುತ್ತೂರು): ಕಾವು ಮಾಡನ್ನೂರಿನ ಹಮೀದ್ ನೆಕ್ಕರೆ ಎಂಬವರ ಪುತ್ರ ಶಾಹಿದ್ (16) ಎಂಬವನು ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದಾನೆ. ಮಾಡನ್ನೂರು ನೂರುಲ್ ಹುದಾ ಅರೇಬಿಕ್ ಶಾಲೆಯ ವಿದ್ಯಾರ್ಥಿಯಾಗಿರುವ ಶಾಹಿದ್ ಮೂರು ದಿನಗಳ ರಜೆಯಲ್ಲಿ ಸುಳ್ಯ ಆರಂಬೂರು ಮಾಂಬ್ಲಿ ಬಳಿ ಇರುವ ಅಜ್ಜಿ ಮನೆಗೆ ತೆರಳಿದ್ದಾನೆ. ಮರುದಿನ ಅಲ್ಲಿಂದ ತನ್ನ ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದು ಮನೆಗೆ ಬಾರದೆ, ಕಾಲೇಜಿಗೂ ಬಾರದೆ ನಾಪತ್ತೆಯಾಗಿದ್ದಾನೆ.

ಶಾಹಿದ್ ನಾಪತ್ತೆ ಬಗ್ಗೆ ಪೋಷಕರು ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೆ.13ರಿಂದ ವಾರ್ಷಿಕ ಪರೀಕ್ಷೆ ಆರಂಭವಾಗಲಿದ್ದು, ಪ್ರಿಪರೇಟರಿ ಪರೀಕ್ಷೆ ನಡೆಯುತ್ತಿರುವ ವೇಳೆ ವಿದ್ಯಾರ್ಥಿ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಈತನ ಗುರುತು ಪರಿಚಯ ಸಿಕ್ಕಿದ್ದಲ್ಲಿ ಮಾಹಿತಿ ಸಿಕ್ಕಿದ್ದಲ್ಲಿ ಸುಳ್ಯ ಪೋಲೀಸ್ ಠಾಣೆಗೆ ಅಥವಾ ಈ ಕೆಳಗೆ ನೀಡಿರುವ ನಂಬರಿಗೆ ಮಾಹಿತಿ ನೀಡುವಂತೆ ಕುಟುಂಬಸ್ಥರು ಕೇಳಿಕೊಂಡಿದ್ದಾರೆ. 9008667484/9980785616

LEAVE A REPLY

Please enter your comment!
Please enter your name here