ಮಂಗಳೂರು(ಹೊಸದಿಲ್ಲಿ): ಎಕ್ಸ್ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ರಿಕ್ಷಾ ಚಾಲಕನೊಬ್ಬ ದಿಲ್ಲಿಯ ಪ್ರಖ್ಯಾತ ಪ್ರವಾಸಿ ತಾಣಗಳ ವಿವರವನ್ನು ಸ್ಪಷ್ಟವಾದ ಇಂಗ್ಲಿಷ್ ಭಾಷೆಯಲ್ಲಿ ಪ್ರವಾಸಿಗರಿಗೆ ನೀಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಆ ವಿಡಿಯೊದಲ್ಲಿ ಯುನೈಟೆಡ್ ಕಿಂಗ್ ಡಮ್ ನಿಂದ ದೆಹಲಿಗೆ ಬಂದ ಪ್ರವಾಸಿಗರಿಗೆ ಜಾಮಾ ಮಸೀದಿ ಹಾಗೂ ಮಸಾಲೆ ಪದಾರ್ಥಗಳ ಏಷ್ಯಾದ ಅತಿ ದೊಡ್ಡ ಮಾರುಕಟ್ಟೆ, ವರ್ಣರಂಜಿತ ಬೀದಿಗಳ ಕುರಿತು ಸೈಕಲ್ ರಿಕ್ಷಾ ಚಾಲಕ ಮಾಹಿತಿ ನೀಡುತ್ತಿರುವುದೂ ಆ ವಿಡಿಯೊದಲ್ಲಿ ಕಂಡು ಬರುತ್ತದೆ. ದಾರಿಯ ನಡುವೆ ಇಕ್ಕಟ್ಟು ಮತ್ತು ಕಿರಿದಾದ ರಸ್ತೆಗಳ ಚಿತ್ರವನ್ನು ಸೆರೆ ಹಿಡಿಯಲು ಅಥವಾ ಅಲ್ಲಿಂದ ಏನನ್ನಾದರೂ ಖರೀದಿಸಲು ಬಯಸಿದರೆ ನನಗೆ ತಿಳಿಸಿ ಎಂದು ಸಲಹೆ ನೀಡುತ್ತಿರುವುದೂ ವಿಡಿಯೋದಲ್ಲಿದೆ. ಬ್ರಿಟನ್ನ ಪ್ರವಾಸಿಗರಿಗೆ ಆ ವ್ಯಕ್ತಿ ನೀಡಿರುವ ಮಾರ್ಗದರ್ಶನದಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಭಾವಿತರಾಗಿದ್ದಾರೆ. ಈ ಪೋಸ್ಟ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಸೈಕಲ್ ರಿಕ್ಷಾ ಚಾಲಕನ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಜನರು ಶ್ಲಾಘಿಸಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
#WATCH: A video of a cycle-rickshaw driver speaking in English to guide tourists in #Delhi has garnered admiration from social media users.
The video, shared by an X user, shows the man explaining details of famous spots in Delhi to foreign tourists. pic.twitter.com/U65eyEs7ke
— India Today NE (@IndiaTodayNE) February 11, 2024