ಜೆರೋಸಾ ಸ್ಕೂಲ್‌ ವಿವಾದ – ಶಾಸಕರುಗಳು, ಕಾರ್ಪೊರೇಟರ್ ಗಳ ವಿರುದ್ಧ ಕೇಸ್ – ಕಾಂಗ್ರೆಸ್ ವಿರುದ್ಧ ಗುಡುಗಿದ ಸಂಸದ ನಳಿನ್ ಕುಮಾರ್‌ ಕಟೀಲ್

ಮಂಗಳೂರು: ಜೆರೋಸಾ ಶಾಲೆ ವಿಚಾರದಲ್ಲಿ ಕೋಮುಭಾವನೆಗೆ ಪ್ರಚೋದಿಸಿರುವ ಶಿಕ್ಷಕಿಯ ಅಮಾನತಿಗೆ ನೈತಿಕ ಬೆಂಬಲ ನೀಡಿರುವ ಶಾಸಕರುಗಳ, ಕಾರ್ಪೊರೇಟರ್ ಗಳ ವಿರುದ್ಧ ಕೇಸು ದಾಖಲಿಸಿರುವುದು, ಕಾನೂನು ಕ್ರಮ ಕೈಗೊಂಡ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಕಾಂಗ್ರೆಸ್ ತುಷ್ಟೀಕರಣ ನೀತಿಯ ಪರಮಾವಧಿ. ಇದು ಮತಬ್ಯಾಂಕಿಗೆ ಮಾಡಿರುವ ಕಾಂಗ್ರೆಸ್ ನ ಹೀನ ರಾಜಕಾರಣ. ಇದನ್ನು ನಾವು ಖಂಡಿಸುತ್ತೇವೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿಯ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ಜೆರೋಸಾ ಶಾಲೆ ವಿಚಾರದಲ್ಲಿ ವರ್ಗಾವಣೆ ಮಾಡಿರುವ ಡಿಡಿಪಿಐಯನ್ನು ವಾಪಸ್ ಕರೆಸಿಕೊಳ್ಳಬೇಕು‌. ಶಾಸಕರುಗಳು, ಕಾರ್ಪೊರೇಟ್ ಗಳ ಮೇಲಿನ ಕೇಸ್ ವಾಪಸ್ ತೆಗೆದುಕೊಳ್ಳಬೇಕು. ರಾಮವಿರೋಧಿ ಹೇಳಿಕೆ ನೀಡಿರುವ ಶಿಕ್ಷಕಿಯ ಮೇಲೆ ಏನು ಕ್ರಮ ಆಗಿದೆ ಎಂದು ತಿಳಿಸಿ ಎಂದು ನಳಿನ್ ಕುಮಾರ್ ತಾಕೀತು ಮಾಡಿದ್ದಾರೆ.

LEAVE A REPLY

Please enter your comment!
Please enter your name here