“ಕರ್ಣಾಟಕ ಬ್ಯಾಂಕ್”ನ ಶತಮಾನೋತ್ಸವದ ಸಂಭ್ರಮಾಚರಣೆ-ಹದಿನೈದು ನೂತನ ಶಾಖೆ ಉದ್ಘಾಟನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ “ಕರ್ಣಾಟಕ ಬ್ಯಾಂಕ್”ನ ಶತಮಾನೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮ ಮಂಗಳೂರಿನ ಟಿ.ಎಂ.ಎ ಪೈ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಶತಮಾನೋತ್ಸವ ಕಟ್ಟಡದ ಉದ್ಘಾಟನೆ ಮತ್ತು ಶತಮಾನೋತ್ಸವದ ಸ್ಮರಣಾರ್ಥವಾಗಿ 100 ರೂಪಾಯಿ ನಾಣ್ಯ, ಕರ್ಣಾಟಕ ಬ್ಯಾಂಕ್ ನ ಪೋಸ್ಟಲ್ ಸ್ಟ್ಯಾಂಪ್ ಅನಾವರಣ ಮತ್ತು ಲೋಕಾರ್ಪಣೆ, ಹಾಗೂ ಹದಿನೈದು ನೂತನ ಶಾಖೆ ಮತ್ತು ವೆಬ್ ಸೈಟ್ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್, ಅಟರ್ನಿ ಜನರಲ್ ಫೋರ್ ಇಂಡಿಯಾ ಆರ್. ವೆಂಕಟರಮಣಿ ಇತರ ಗಣ್ಯರು ಸೇರಿ ನೆರವೇರಿಸಿದರು. ಈ ವೇಳೆ ಅಟರ್ನಿ ಜನರಲ್ ಫೋರ್ ಇಂಡಿಯಾ ಆರ್. ವೆಂಕಟರಮಣಿ ಮಾತನಾಡಿ ಕರ್ಣಾಟಕ ಬ್ಯಾಂಕ್ ನೀಡುತ್ತಿರುವ ಅಭೂತಪೂರ್ವ ಸೇವೆಯನ್ನು ಶ್ಲಾಘಿಸಿ ಮುಂದಿನ ದಿನಗಳಲ್ಲಿ ಈ ಸಂಸ್ಥೆ ಇನ್ನಷ್ಟು ಸೇವೆ ನೀಡುವಂತಾಗಲಿ ಎಂದು ಶುಭಹಾರೈಸಿದರು.

ಬಳಿಕ ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ನೀಡಿದ ಸೇವೆ ಅಮೋಘ ಆದ್ರೆ ಅದನ್ನು ಉಳಿಸಿಕೊಂಡಿಲ್ಲ ಆದೇನೆ ಆಗಲಿ ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಸಂಭ್ರಮಾಚರಣೆಯಲ್ಲದೆ ಇನ್ನಷ್ಟು ಸಂಭ್ರಮಾಚರಣೆ ಮಾಡಲಿ. ಈ ಬ್ಯಾಂಕ್ ಅನ್ನು ನಮ್ಮ ಬ್ಯಾಂಕ್ ಆಗಿ ಉಳಿಸಿ ಇತರ ಬ್ಯಾಂಕ್ ಗಳನ್ನು ನಮ್ಮ ಕರ್ಣಾಟಕ ಬ್ಯಾಂಕ್ ನೊಂದಿಗೆ ವಿಲೀನ ಮಾಡಿಸುವ ಕಾರ್ಯ ನಮ್ಮಿಂದಾಗಲಿ. ಕರ್ಣಾಟಕ ಬ್ಯಾಂಕ್ ಗೆ ಸರ್ಕಾರದಿಂದ ಯಾವ ರೀತಿ ಸಹಕಾರ ಬೇಕಿದ್ರು ನೀಡೋಕೆ ಸಿದ್ದ ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ, ಸಿಇಓ ಶ್ರೀಕೃಷ್ಣಣ್ ಹೆಚ್, ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್, ಬ್ಯಾಂಕ್ ನ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್, ಕರ್ನಾಟಕ ವೃತ್ತ ಹಿರಿಯ ಪೋಸ್ಟ್‌ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here