ಮಂಗಳೂರು ಮೂಲದ ಪ್ರಯಾಣಿಕರ ಮೇಲೆ ಕುಮಟಾ ಹೊಳೆಗದ್ದೆ ಟೋಲ್ ಸಿಬ್ಬಂದಿಯಿಂದ ಹಲ್ಲೆ-ದೂರು ದಾಖಲು

ಮಂಗಳೂರು(ಕಾರವಾರ): ಕಾರು ಪ್ರಯಾಣಿಕರ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹೊಳೆಗದ್ದೆ ಟೋಲ್ ಪ್ಲಾಝಾದಲ್ಲಿ ನಡೆದಿದ್ದು ಘಟನೆಯಲ್ಲಿ ಮಂಗಳೂರು ಮೂಲದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಹಲ್ಲೆಯಿಂದ ಮಹಿಳೆ ಸೇರಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರಿನ ಮುಜೀಝ್ ಎಂಬವರ ಕುಟುಂಬ ಕುಮಟಾ ಮಾರ್ಗವಾಗಿ ಗದಗದ ಲಕ್ಷ್ಮೀಶ್ವರಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಕುಮಟಾ ಹೊಳೆಗದ್ದೆ ಟೋಲ್ ಗೇಟ್​ನಲ್ಲಿ ಫಾಸ್ಟ್ ಟ್ಯಾಗ್​ನಿಂದ ಹಣ ಕಡಿತವಾಗದೇ ಸಮಸ್ಯೆಯಾದಾಗ, ಟೋಲ್ ಸಿಬ್ಬಂದಿ ಕಿರಣ್, ಸತೀಶ್ ಹಾಗೂ ಮಂಜುನಾಥ್ ಎಂಬುವವರೊಂದಿಗೆ ಮಾತಿಗೆ ಮಾತು ಬೆಳೆದು ಸಿಬ್ಬಂದಿ ಮಜೀಝ್ ರ ಕಾರಿನ ಗಾಜು ಪುಡಿ ಮಾಡಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಮಹಿಳೆಯರು, ಮಜೀಝ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here