ಮಂಗಳೂರು(ಮೈಸೂರು): ಅಯೋಧ್ಯೆ ಯಾತ್ರಿಕರು ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಅಹಿತಕರ ದಾಂಧಲೆ ನಡೆದಿದ್ದು, ಅಯೋಧ್ಯೆಗೆ ತೆರಳುವ ರೈಲು ಹತ್ತಿದ ಅನ್ಯಕೋಮಿನ ಕೆಲ ಕಿಡಿಗೇಡಿಗಳು ರೈಲಿನಲ್ಲಿ ಪುಂಡಾಟ ನಡೆಸಿ ಯಾತ್ರಿಕರಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
ಬೋಗಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದು, ಹೊಸಪೇಟೆ ನಿಲ್ದಾಣದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗ್ತಿದ್ದಂತೆ ಸ್ಥಳಕ್ಕೆ ಬಂದ ಎಸ್ಪಿ ಶ್ರೀಹರಿಬಾಬು, ಎಲ್ಲರ ಮನವೊಲಿಸಿ, ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಯಾತ್ರಿಕರ ಜೊತೆಗೆ ವಾಗ್ವಾದಕ್ಕಿಳಿದ ಮೂವರು ಕಿಡಿಗೇಡಿಗಳನ್ನು ವಿಚಾರಣೆ ನಡೆಸಿದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟು ಕಳಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಡೆದ ಈ ಘಟನೆಯಿಂದಾಗಿ ಮೈಸೂರು-ಅಯೋಧ್ಯಾಧಾಮ ರೈಲು 2 ಗಂಟೆ ತಡವಾಗಿ ಪ್ರಯಾಣ ಬೆಳೆಸಿದೆ.