ನಾನು ಮಲಾಲಾ ಅಲ್ಲ, ನನ್ನ ದೇಶದಲ್ಲಿ ಸುರಕ್ಷಿತವಾಗಿದ್ದೇನೆ -ವೈರಲ್‌ ಆದ ಕಾಶ್ಮೀರಿ ಯುವತಿ ಯಾನಾ ಮೀರ್‌ ಭಾಷಣ 

ಮಂಗಳೂರು(ಹೊಸದಿಲ್ಲಿ): ನಾನು ಮಲಾಲಾ ಯೂಸೂಫ್ ಅಲ್ಲ. ನಾನು ಭಾರತದಲ್ಲಿ ಸುರಕ್ಷಿತವಾಗಿದ್ದೇನೆ. ನನ್ನ ತವರು ದೇಶವನ್ನು ಎಂದೂ ತೊರೆಯಬೇಕಾಗಿಲ್ಲ ಎಂದು ಬ್ರಿಟನ್‌ ಸಂಸತ್‌ ಭವನದಲ್ಲಿ ಕಾಶ್ಮೀರಿ ಹೋರಾಟಗಾರ್ತಿ ಯಾನಾ ಮೀರ್‌ ಮಾಡಿರುವ ಭಾಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬ್ರಿಟನ್‌ನ ಜಮ್ಮು ಮತ್ತು ಕಾಶ್ಮೀರ್‌ ಅಧ್ಯಯನ ಕೇಂದ್ರ ಆಯೋಜಿಸಿದ್ದ ಸಂಕಲ್ಪ ದಿವಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಯಾನಾ ಮೀರ್‌, ನಾನು ನನ್ನ ದೇಶ ಭಾರತದಲ್ಲಿ ಸ್ವತಂತ್ರವಾಗಿದ್ದೇನೆ. ಭಾರತದ ಭಾಗವಾಗಿರುವ ನನ್ನ ತವರು ನೆಲ ಕಾಶ್ಮೀರದಲ್ಲಿ ಸುರಕ್ಷಿತವಾಗಿದ್ದೇನೆ. ನನ್ನ ದೇಶ, ಅಭಿವೃದ್ಧಿ ಹೊಂದುತ್ತಿರುವ ನನ್ನ ಕಾಶ್ಮೀರದ ಬಗ್ಗೆ ಅಪಖ್ಯಾತಿ ಹರಡುತ್ತಿರುವ ಮಲಾಲಾರನ್ನು ನಾನು ವಿರೋಧಿಸುತ್ತೇನೆ. ಸಾಮಾಜಿಕ ಜಾಲತಾಣಗಳ ಟೂಲ್‌ಕಿಟ್‌ ಸದಸ್ಯರನ್ನು ವಿರೋಧಿಸುತ್ತೇನೆ. ಕಾಶ್ಮೀರಕ್ಕೆ ಎಂದೂ ಭೇಟಿ ನೀಡದೇ, ಎಲ್ಲೋ ಕುಳಿತು ದಬ್ಟಾಳಿಕೆ ಕಥೆಗಳನ್ನು ಸೃಷ್ಟಿಸುತ್ತಿರುವ ವಿದೇಶಿ ಮಾಧ್ಯಮಗಳನ್ನು ನಾನು ಖಂಡಿಸುತ್ತೇನೆ ಎಂದು ಯಾನಾ ಮೀರ್‌ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದ್ದಾರೆ. ಯಾನಾ ಕಾಶ್ಮೀರದ ವ್ಲಾಗರ್‌ ಮತ್ತು ಪತ್ರಕರ್ತೆಯೂ ಆಗಿದ್ದಾರೆ.

LEAVE A REPLY

Please enter your comment!
Please enter your name here