ಹಿಂಜಾವೇ ಜಿಲ್ಲಾ ಸಹ ಸಂಯೋಜಕ ಸಮಿತ್‌ ರಾಜ್‌ ಗಡಿಪಾರಿಗೆ ಪೊಲೀಸ್‌ ಇಲಾಖೆ ಚಿಂತನೆ-ಗಡಿಪಾರು ಮಾಡಿದಲ್ಲಿ ಉಗ್ರ ಪ್ರತಿಭಟನೆ-ಹಿಂಜಾವೇ ಜಿಲ್ಲಾ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ ಎಚ್ಚರಿಕೆ

ಮಂಗಳೂರು: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಹಿಂದೂ ಸಂಘಟನೆಗಳನ್ನು ಧಮನಗೊಳಿಸುವ ನೀತಿಯನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದು, ಹಿಂದೂಗಳ ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಕೇಸುಗಳನ್ನು ದಾಖಲಿಸಿ ಚಿತ್ರಹಿಂಸೆ ನೀಡುವ ಕೆಲಸ ಮಾಡುತ್ತಿದೆ ಎಂದು ಮಂಗಳೂರು ಗ್ರಾಮಾಂತರ ಜಿಲ್ಲೆಯ ಹಿಂದೂ ಜಾಗರಣಾ ವೇದಿಕೆ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನರಸಿಂಹ ಶೆಟ್ಟಿ ಮಾಣಿ, ಸಂಘಟನೆಯ ಸಹ ಸಂಯೋಜಕರಾಗಿರುವ ಸಮಿತ್‌ ರಾಜ್‌ ದರೆಗುಡ್ಡೆ ಅವರ ವಿರುದ್ಧ 2013 ರಿಂದ 2018ರವರೆಗಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಹಲವು ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿದ್ದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಅವಬರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ‌ ದಾಖಲಾಗಿರುವುದಿಲ್ಲ. ಅವರನ್ನು ತೇಜೋವದೆ ಮಾಡುವ ಮತ್ತು ವಿತ್ರಹಿಂಸೆ ನೀಡುವ ಉದ್ದೇಶದಿಂದ ಸಮಿತ್‌ ರಾಜ್‌ ವಿರುದ್ಧ ಕಾನೂನು ಬಾಹಿರ ಗಡಿಪಾರಿಗೆ ಸಿದ್ಧತೆ ಮಾಡಲಾಗುತ್ತಿದ್ದು ಇದು ಖಂಡನೀಯ ಎಂದು ಹೇಳಿದ್ದಾರೆ. ಸಮಿತ್‌ ರಾಜ್‌ ವಿರುದ್ಧ ಗಡಿಪಾರು ಆದೇಶ ಮಾಡಿದಲ್ಲಿ ಅದರ ವಿರುದ್ಧ ಉಗ್ರ ಪ್ರತಿಭಟನೆ ಮತ್ತು ಕಾನೂನು ಹೋರಾಟ ಮಾಡುವುದಾಗಿ ಪೊಲೀಸ್‌ ಇಲಾಖೆಗೆ ಹಿಂದೂ ಜಾಗರಣಾ ವೇದಿಕೆ ಎಚ್ಚರಿಕೆ ನೀಡುವುದಾಗಿ ನರಸಿಂಹ ಶೆಟ್ಟಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here