ಮಂಗಳೂರು(ಪುತ್ತೂರು): ರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕೂರ್ನಡ್ಕ ಮರೀಲ್ ಹನಫಿ ಮಸೀದಿ ಬಳಿಯ ನಿವಾಸಿ ದಿ.ಇಬ್ರಾಹಿಂ ರವರ ಮಗ ರಫೀಕ್ ಮಾ.2ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಹಿಂದೆ ಪುತ್ತೂರಿನ ಎ ಎಂ ಕಾಂಪ್ಲೆಕ್ಸ್ ನಲ್ಲಿ ಸ್ಕೈ ಮೊಬೈಲ್ ಅಂಗಡಿಯನ್ನು ಹೊಂದ್ದಿದ್ದ ರಫೀಕ್, ನಂತರದ ದಿನಗಳಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತಿದ್ದರು. ಕೆಲ ದಿನಗಳ ಹಿಂದೆ ಸಾಮೆತ್ತಡ್ಕದ ತನ್ನ ಅಣ್ಣನ ಮನೆಗೆ ರಿಕ್ಷಾದಲ್ಲಿ ತೆರಳಿದ್ದ ರಫೀಕ್, ರಿಕ್ಷಾವನ್ನು ಶೆಡ್ ನಲ್ಲಿ ಪಾರ್ಕ್ ಮಾಡಿ ಗೇಟ್ ಹಾಕಲೆಂದು ತೆರಳಿದ್ದರು. ಅಷ್ಟರಲ್ಲಿ ನಿಲ್ಲಿಸಿದ್ದ ರಿಕ್ಷಾ ಹಠಾತ್ ಹಿಮ್ಮುಖವಾಗಿ ಚಲಿಸಿ, ಗೇಟ್ ಹಾಕುತ್ತಿದ್ದ ರಫೀಕ್ ಅವರಿಗೆ ಢಿಕ್ಕಿ ಹೊಡೆದಿದೆ. ಗೇಟ್ ಹಾಗೂ ರಿಕ್ಷಾ ನಡುವೆ ಸಿಲುಕಿದ ರಫೀಕ್ ಅವರು, ಗಂಭೀರ ಗಾಯಗೊಂಡಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಫೀಕ್, ಚಿಕಿತ್ಸೆ ಫಲಕಾರಿಯಾಗದೇ ಮಾ.2ರಂದು ರಾತ್ರಿ ಕೊನೆಯುಸಿರೆಳೆದಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ, ಮೂವರು ಗಂಡು ಮಕ್ಕಳು ಮತ್ತು ಸಹೋದರರಾದ ಅಬ್ದುಲ್ ಅಝೀಝ್, ಅಬ್ದುಲ್ ರಝಾಕ್, ಅಕಾಶ್ ಪೂಟ್ ವೇರ್ ಮಾಲಕ ಲತೀಫ್ ಮತ್ತು ಝೀಯಾದ್ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.