ಅಡ್ಕಾರಿನಲ್ಲಿ ಪೈಂಟಿಂಗ್ ಮಾಡುವ ವೇಳೆ ಕಟ್ಟಡದಿಂದ ಬಿದ್ದು ವ್ಯಕ್ತಿ ಮೃತ್ಯು-ದೂರು ದಾಖಲು

ಮಂಗಳೂರು(ಅಡ್ಕಾರು): ಪೈಂಟಿಂಗ್‌ ಕೆಲಸಕ್ಕೆ ಬಂದ ವ್ಯಕ್ತಿಯೊಬ್ಬರು ಅಡ್ಕಾರಿನಲ್ಲಿ ಕಟ್ಟಡದಿಂದ ಕಾಲುಜಾರಿ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾ.7ರಂದು ಸುಳ್ಯ ಅಡ್ಕಾರ್ ನ ಜಿ ಅಬ್ದುಲ್ಲಾ ಎಂಬವರ ಮನೆಯಲ್ಲಿ ಪೈಂಟಿಂಗ್ ಕೆಲಸಕ್ಕಾಗಿ ನೀರು ಹಾಕಿ ತೊಳೆಯುತ್ತಿರುವ ಸಂದರ್ಭದಲ್ಲಿ‌ ಅಡೂರು ಪಳ್ಳಂಗೊಡು ನಿವಾಸಿ ಜಬ್ಬಾರ್ ಎಂಬವರು ಕಾಲುಜಾರಿ ಕಟ್ಟಡದಿಂದ ಕೆಳಗೆ ಬಿದ್ದಿದ್ದರು. ತಲೆಗೆ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಸುಳ್ಯ ಕೆವಿಜಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗುವ ಗುಣಲಕ್ಷಣ ಇಲ್ಲದ ಕಾರಣ ವೈದ್ಯರು ಕೈಚೆಲ್ಲಿದ್ದು ಮನೆಗೆ ಕರೆತರುತ್ತಿರುವ ವೇಳೆ ಆ್ಯಂಬುಲೆನ್ಸ್ ನಲ್ಲಿ ಜಬ್ಬಾರ್ ಮೃತಪಟ್ಟಿದ್ದಾರೆ. ಮನೆ ಮಾಲೀಕ ಅಬ್ದುಲ್ಲಾ ಅವರ ನಿರ್ಲಕ್ಷ್ಯತನದಿಂದ ಈ ಘಟನೆ ನಡೆದಿದೆ ಎಂದು ಮೃತ ಜಬ್ಬಾರ್‌ ಸಹೋದರ ಅಬ್ದುಲ್‌ ಖಾದರ್‌ ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತರು ಪತ್ನಿ ಮೂವರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here