ಲೋಕಸಭಾ ಚುನಾವಣೆಗೆ ಕರ್ನಾಟಕದ 7 ಕ್ಷೇತ್ರ ಸೇರಿ 39 ಅಭ್ಯರ್ಥಿಗಳ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ

ಮಂಗಳೂರು(ನವದೆಹಲಿ): ಐಎನ್‌ಡಿಐಎ ಮೈತ್ರಿಯ ಸೀಟು ಹಂಚಿಕೆ ಮಾತುಕತೆ ಅಂತಿಮಗೊಳಿಸಿರುವ ಕಾಂಗ್ರೆಸ್ ಇದೀಗ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ, ಭೂಪೇಶ್ ಬಾಘೆಲ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ರಾಹುಲ್ ಗಾಂಧಿ, ಭೂಪೇಶ್ ಬಾಘೆಲ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಚುನಾವಣಾ ಸಮಿತಿಯ ಪವನ್ ಖೇರಾ, ಕೆಸಿ ವೇಣುಗೋಪಾಲ್, ಅಜಯ್ ಮಾಕೇನ್ ಮೊದಲ ಪಟ್ಟಿ ಬಿಡುಗಡೆ ಮಾಡಿದರು. ದೇಶದ 39 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಈ ಪೈಕಿ ಕರ್ನಾಟಕದ 7 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದೆ.

ಕರ್ನಾಟಕದ ಅಭ್ಯರ್ಥಿಗಳು:
ವಿಜಯಪುರ: ಎಸ್‌ಆರ್‌ ಅಲಗೋರ್‌
ಹಾವೇರಿ: ಅನಂದ್‌ಸ್ವಾಮಿ ಗಡ್ಡೇವರ ಮಠ
ತುಮಕೂರು: ಎಸ್‌ಪಿ ಮುದ್ದಹನುಮೇಗೌಡ
ಮಂಡ್ಯ: ವೆಂಕಟರಾಮೇಗೌಡ (ಸ್ಟಾರ್‌ ಚಂದ್ರು)
ಬೆಂಗಳೂರು ಗ್ರಾಮೀಣ: ಡಿಕೆ ಸುರೇಶ್‌
ಶಿವಮೊಗ್ಗ: ಗೀತಾ ಶಿವರಾಜ್‌ಕುಮಾರ್‌
ಹಾಸನ್‌: ಶ್ರೇಯಸ್‌ ಪಟೇಲ್‌

ಕೇರಳ ಅಭ್ಯರ್ಥಿಗಳು:
ಕೆ ಸಿ ವೇಣುಗೋಪಾಲ- ಆಲಪುರ
ರಾಹುಲ್ ಗಾಂಧಿ- ವೈನಾಡ್
ಶಶಿ ತರೂರ್- ತಿರುವನಂತಪುರಂ.

LEAVE A REPLY

Please enter your comment!
Please enter your name here